

ಆನೇಕಲ್: ಅಂಗನವಾಡಿ ಕೇಂದ್ರಗಳಿಗೆ ನೀಡುವ ಬಾಡಿಗೆ ಬದಲು ಸರ್ಕಾರದ ಸಿಎ ನಿವೇಶನ ಪಡೆದು ಕಟ್ಟಡ ಕಟ್ಟುವಂತೆ ಶಾಸಕ ಬಿ. ಶಿವಣ್ಣ ಸಲಹೆ ನೀಡಿದರು.
ಆನೇಕಲ್‌ನ ತಾಪಂ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಇತ್ತೀಚಿಗೆ ಕೆಲವು ಇಲಾಖೆಯ ಅಧಿಕಾರಿಗಳು ಜವಾಬ್ದಾರಿ ಅರಿತು ಕೆಲಸ ಮಾಡುತ್ತಿಲ್ಲ ಎಂಬ ದೂರು ಬಂದಿವೆ. ಸಾರ್ವಜನಿಕರ ಕೆಲಸವನ್ನು ಮಾಡುತ್ತಿದ್ದೇವೆ ಎಂಬುದನ್ನು ಅರಿತು ಕೆಲಸ ಮಾಡಬೇಕು. ಅಧಿಕಾರಿಗಳು ನಮ್ಮ ತಾಳ್ಮೆಯನ್ನು ಪರೀಕ್ಷಿಸಬಾರದು. ಬಡವರ ಕೆಲಸ ಮಾಡಲು ಯಾವುದೇ ಇಲಾಖೆಯಿಂದ ವಿಳಂಬವಾದರೂ, ಸುಮ್ಮನಿರುವುದಿಲ್ಲ ಎಂದರು.
ಮುಂದಿನ ಸಭೆಯಲ್ಲಿ ಇದೇ ರೀತಿ ದೂರುಗಳು ಕೇಳಿ ಬಂದರೆ ಅಂಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಪರಿಹಾರಧನಕ್ಕೆ ಸರಿಯಾದ ಮಾಹಿತಿ ಕೊಡಿ: ಆನೇಕಲ್ ತಾಲೂಕಿನ ಮೂವರು ಸರ್ಕಾರಿ ನೌಕರರು ಕರೊನಾಕ್ಕೆ ಬಲಿಯಾಗಿದ್ದಾರೆ. ಸರ್ಕಾರದಿಂದ ಅವರಿಗೆ ಪರಿಹಾರ ನೀಡಬೇಕಾಗಿದೆ. ಆದರೆ, ಅವರ ಮಾಹಿತಿಯನ್ನು ಸರಿಯಾಗಿ ಕೊಡುತ್ತಿಲ್ಲ. ಕೇಂದ್ರ ಸರ್ಕಾರದಿಂದ 4 ಲಕ್ಷ ರೂ. ಹಾಗೂ ರಾಜ್ಯ ಸರ್ಕಾರ 1 ಲಕ್ಷ ರೂ. ಪರಿಹಾರ ೋಷಿಸಿವೆ. ಆದ್ದರಿಂದ, ಅಧಿಕಾರಿಗಳು ಇಲಾಖಾವಾರು ಮಾಹಿತಿ ಪಡೆದು ಸಲ್ಲಿಸುವಂತೆ ಬಿ. ಶಿವಣ್ಣ ಹೇಳಿದರು.
ಶಾಸಕರ ನಿಧಿಯಿಂದ 1 ಕೋಟಿ ರೂ.: ಆನೇಕಲ್ ತಾಲೂಕಿನಲ್ಲಿ ಕರೊನಾ ಲಸಿಕೆ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಆದ್ದರಿಂದ, ಶಾಸಕರ ಅನುದಾನದಿಂದ 1 ಕೋಟಿ ರೂ. ಕೊಟ್ಟಿದ್ದು, ಲಸಿಕೆ ಖರೀದಿಸಲು ಮನವಿ ಮಾಡಿಕೊಂಡಿದ್ದೇನೆ ಎಂದು ತಿಳಿಸಿದರು.
ಶಾಲಾ ಶುಲ್ಕ ಪರಿಶೀಲಿಸಿ: ಸರ್ಕಾರ ಖಾಸಗಿ ಶಾಲೆಗಳಿಗೆ ಶುಲ್ಕ ನಿಗದಿ ಮಾಡಿದೆ. ಯಾವುದೇ ಶಾಲೆಯವರಾಗಲಿ ಮಕ್ಕಳ ಪಾಲಕರಿಗೆ ಹೆಚ್ಚಿನ ತೊಂದರೆ ಕೊಡಬಾರದು. ಸರ್ಕಾರ ಕೂಡ ಬಡವರ ಶುಲ್ಕವನ್ನು ಭರಿಸಬೇಕು. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಸುರಕ್ಷತೆ ಕಾಯ್ದುಕೊಳ್ಳಬೇಕು. ಮಾಸ್ಕ್, ೇಸ್‌ಶೀಲ್ಡ್ ಧರಿಸಿ, ಸ್ಯಾನಿಟೈಸರ್‌ನೊಂದಿಗೆ ಪರೀಕ್ಷಾ ಕೇಂದ್ರಗಳಿಗೆ ತೆರಳಬೇಕು ಎಂದು ಶಾಸಕರು ತಾಕೀತು ಮಾಡಿದರು.