ಅಂಗನವಾಡಿಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಬೋಧನೆ

CTD ANGANAVADI SANDRBIKA CHITRA-----
Published on

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ

ರಾಜ್ಯದಲ್ಲಿರುವ ಮಿನಿ ಅಂಗನವಾಡಿಗಳನ್ನು ಉನ್ನತೀಕರಿಸಿರುವ ಮಹಿಳಾ ಮತ್ತು ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಅಂಗನವಾಡಿ ಕೇಂದ್ರಗಳಲ್ಲಿ ಜೂನ್‌ನಿಂದ ಎಲ್‌ಕೆಜಿ,ಯುಕೆಜಿ(ಪೂರ್ವ ಪ್ರಾಥಮಿಕ ಶಿಕ್ಷಣ)ಆರಂಭಕ್ಕೆ ಸಜ್ಜಾಗುತ್ತಿದೆ. 69921ಅಂಗನವಾಡಿಗಳು ಹಾ ಗೂ ಉನ್ನತೀಕರಿಸಿದ 2329 ಮಿನಿ ಅಂಗನವಾಡಿಗಳಿಂದಾಗಿ ರಾಜ್ಯದಲ್ಲೀಗ ಅಂಗನವಾಡಿಗಳ ಸಂಖ್ಯೆ 72250ಕ್ಕೆ ಏರಿಕೆಯಾಗಿದೆ. ಮೇಲ್ದ ರ್ಜೆಗೆ ಏರಿದ ಈ ಅಂಗನವಾಡಿಗಳಿಗೆ ಸಹಾಯಕಿಯರ ನೇಮಕಕ್ಕೂ ಅಗತ್ಯ ಕ್ರಮ ವಹಿಸುವಂತೆ ಇಲಾಖೆ ನಿರ್ದೇಸಿದೆ.

ಎಲ್‌ಕೆಜಿ,ಯುಕೆಜಿ ಶಿಕ್ಷಣವನ್ನು ಅಂಗನವಾಡಿಗಳಲ್ಲೇ ಪ್ರಾರಂಭಿಸಬೇಕೆಂಬ ಬೇಡಿಕೆಗೆ ಸ್ಪಂದಿಸಿರುವ ಇಲಾಖೆ, ಸದ್ಯ 2 ಅಂಗನವಾಡಿ ಕೇಂದ್ರಗಳನ್ನು ಒಂದರಂತೆ ಪೂರ್ವ ಪ್ರಾಥಮಿಕ ಶಿಕ್ಷಣ ಬೋಧಿಸಲು ಸಜ್ಜಾಗಿದೆ. ರಾಜ್ಯದಲ್ಲಿ 3 ರಿಂದ 6ವರ್ಷದೊಳಗಿನ 1,58,5205 ಅಂಗನವಾಡಿ ಮಕ್ಕಳಿದ್ದಾರೆ. 4-5 ವರ್ಷದೊಳಗಿನ ಮಕ್ಕಳಿಗೆ ಎಲ್‌ಕೆಜಿ ಹಾಗೂ 5-6 ವರ್ಷದೊಳಗಿನ ಮಕ್ಕಳಿಗೆ ಯುಕೆಜಿ ಶಿಕ್ಷಣ ಬೋ ಧಿಸಲಾಗುತ್ತಿದ್ದು,ಪಠ್ಯ ಹಾಗೂ ಬೋಧಕರ ಕೈಪಿಡಿ ಪೂರೈಸಲಾಗುತ್ತಿದೆ.

ಕನಿಷ್ಠ ಸೆಕೆಂಡ್ ಪಿಯುಸಿ ವಿದ್ಯಾರ್ಹತೆಯ ಅಂಗನವಾಡಿ ಕಾರ‌್ಯಕರ್ತೆಯರು,ದೈನಂದಿನ ಕರ್ತವ್ಯಗಳೊಂದಿಗೆ,ಎಲ್‌ಕೆಜಿ,ಯುಕೆಜಿ ಶಿಕ್ಷಕರಾಗಿ ಕೂಡ ಕೆಲಸ ನಿರ್ವಹಿಸಲಿದ್ದಾರೆ. ಇವರಿಗೆ ಅಗತ್ಯ ತರಬೇತಿಯನ್ನೂ ನೀಡಲಾಗುತ್ತದೆ. ಯಾವ ಜಿಲ್ಲೆಯ ಲ್ಲಿ ಎಷ್ಟು ಅಂಗನ ವಾಡಿಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಬೇಕು ಎಂಬುದರ ಕುರಿತಂತೆ ಇಲಾಖೆ ಆದೇಶ ಹೊರಡಿಸಬೇಕಿದೆ. ರಾಜ್ಯದ ಒಟ್ಟು ಅಂಗನವಾಡಿಗಳ ಪೈಕಿ ಕನಿಷ್ಠ ಶೇ.10ರಲ್ಲಿ ಎಲ್‌ಕೆಜಿ,ಯುಕೆಜಿ ಶಿಕ್ಷಣ ಜೂನ್ ಮೊದಲವಾರದಿಂದ ಪ್ರಾರಂಭವಾಗುವ ನಿರೀಕ್ಷೆ ಇದೆ. ಇಂ ಗ್ಲಿಷ್ ಮತ್ತು ಕನ್ನಡದಲ್ಲಿ ಬೋಧಿಸಲಾಗುತ್ತದೆ. ಕ್ಯೂಆರ್‌ಕೋಡ್ ಮೂಲಕ ಕಲಿಕೆಗೆ ಎಲ್‌ಇಡಿ ಟಿವಿಗಳೂ ಮಕ್ಕಳಿಗೆ ಯೂನಿಫಾರಂ ಪೂರೈಕೆಯಾಗಲಿವೆ.

----------------

ಬಾಕ್ಸ್.

ವಿವಿಧ ಜಿಲ್ಲೆಗಳಲ್ಲಿರುವ ಅಂಗನವಾಡಿ,ಮೇಲ್ದರ್ಜೆಗೆ ಏರಿದ ಮಿನಿ ಅಂಗನವಾಡಿಗಳ ಸಂಖ್ಯೆ

ಉಡುಪಿ 1222-0. ಕಲಬುರಗಿ 3420-27.ವಿಜಯಪುರ 2755-1. ಬಾಗಲಕೋಟೆ 2444-17,ಉತ್ತರ ಕನ್ನಡ 2782-136. ಶಿ ವಮೊಗ್ಗ 2563-261. ಬೀದರ್ 2051-1. ದಕ್ಷಿಣಕನ್ನಡ 2131-5. ಕೊಪ್ಪಳ 1960-24. ಧಾರವಾಡ 1622-6. ಕೊಡಗು 888-14. ಚಾಮರಾಜನಗರ 1444-40.

ಹಾವೇರಿ 1991-5.ಚಿಕ್ಕಮಗಳೂರು 1858-117. ವಿಜಯನಗರ 1590-29. ಬೆಳಗಾವಿ 5656-14. ಬೆಂಗಳೂರು ನಗರ 2877-2.ಕೋಲಾರ 2180-55. ಗದಗ 1248-1. ಮೈಸೂರು 2933-107. ಚಿತ್ರದುರ್ಗ 2428-97. ರಾಮನಗರ 1586-242.ರಾಯ ಚೂರು 2856-32. ಯಾದಗಿರಿ 1568-21. ದಾವಣಗೆರೆ 1771-43. ಬೆಂಗಳೂರು ಗ್ರಾಮಾಂತರ 1277-65. ಬಳ್ಳಾರಿ 1358-13 ಹಾಸನ 2691-191.ಚಿಕ್ಕಬಳ್ಳಾಪುರ 2014-100. ತುಮಕೂರು 4199-416. ಮಂಡ್ಯ 2558-247.

--------------

ಕೋಟ್

ಅಂಗನವಾಡಿಗಳಲ್ಲಿ ಎಲ್‌ಕೆಜಿ,ಯುಕೆಜಿ ಆರಂಭಿಸುವ ಕುರಿತಂತೆ ಆದೇಶ ಬರಬೇಕಿದೆ. ನಮ್ಮ ಜಿಲ್ಲೆಯಿಂದ 231 ಕಡೆ ಪೂರ್ವಪ್ರಾಥಮಿಕ ಶಿಕ್ಷಣ ಬೋಧನೆಗೆ ಪ್ರಸ್ತಾವನೆ ಕಳಿಸಲಾಗಿದ್ದು,200ಕ್ಕೆ ಒಪ್ಪಿಗೆ ದೊರೆಯುವ ನಿರೀಕ್ಷೆ ಇದೆ.

ಭಾರತಿ ಆರ್.ಬಣಕಾರ್,ಉಪನಿರ್ದೇಶಕಿ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಚಿತ್ರದುರ್ಗ.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net