ಅಂಗನವಾಡಿ ಹೋರಾಟ ಮುಂದೂಡಿಕೆ

206Klb05
Published on

ಕಲಬುರಗಿ: ಎಲ್‌ಕೆಜಿ, ಯುಕೆಜಿ ಸರ್ಕಾರಿ ಶಾಲೆಗಳಲ್ಲಿ ಆರಂಭಿಸುವುದನ್ನು ವಿರೋಧಿಸಿ, ಅಂಗನವಾಡಿಗಳಲ್ಲೇ ಶಾಲಾಪೂರ್ವ ಶಿಕ್ಷಣ ಮುಂದುವರಿಸಲು ಆಗ್ರಹಿಸಿ, ನಕಲು ಯೋಜನೆ ಕೈಬಿಡಬೇಕು, ಗ್ರಾÈಚ್ಯುಟಿ ಆದೇಶಕ್ಕೆ ಆಗ್ರಹಿಸಿ ನಡೆಯುತ್ತಿರುವ ನಿರಂತರ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ಪ್ರಮುಖರಾದ ಶರಣಬಸಪ್ಪ ಮಮಶೆಟ್ಟಿ, ಗೌರಮ್ಮ ಪಾಟೀಲ್, ಶಾಂತಾ ಘಂಟಿ ತಿಳಿಸಿದ್ದಾರೆ. ಸಿಎಂ, ಮಹಿಳಾ, ಮಕ್ಕಳ ಇಲಾಖೆ ಸಚಿವರು, ಅಪರ ಮುಖ್ಯ ಕಾರ್ಯದರ್ಶಿಗಳು ಅಂಗನವಾಡಿ ಸಂಘಟನೆಗಳವರ ಜತೆ ಸಭೆ ನಡೆಸಿ, ಚರ್ಚಿಸಿದ್ದಾರೆ. ಈ ಬಗ್ಗೆ ರ್ಸ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಅಂಗನವಾಡಿ ಮಕ್ಕಳ ಒಳಿತಿನ ದೃಷ್ಟಿಯಿಂದ ಸೂಕ್ತ ಮನವಿ ಮುಂದಿಡಲಾಗಿದೆ. ಪುನಃ ಸಭೆ ಸೇರಿ ಒಟ್ಟಾಭಿಪ್ರಾಯಕ್ಕೆ ಬರಲು ತೀರ್ಮಾನಿಸಲಾಗಿದೆ. ಸಕಾರಾತ್ಮಕ ಸ್ಪಂದನೆ ಕಾರಣ ಸದ್ಯ ಹೋರಾಟ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net