ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ

Published on

ಚಾಮರಾಜನಗರ: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಚಾಮರಾಜನಗರ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

ಚಾಮರಾಜನಗರ ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯಲ್ಲಿ 11 ಅಂಗನವಾಡಿ ಕಾರ್ಯಕರ್ತೆಯರು, 23 ಸಹಾಯಕಿಯರು, ಸಂತೇಮರಹಳ್ಳಿ 8 ಅಂಗನವಾಡಿ ಕಾರ್ಯಕರ್ತೆಯರು, 19 ಸಹಾಯಕಿಯರು, ಗುಂಡ್ಲುಪೇಟೆ 18 ಅಂಗನವಾಡಿ ಕಾರ್ಯಕರ್ತೆಯರು, 45 ಸಹಾಯಕಿಯರು, ಕೊಳ್ಳೇಗಾಲ 14 ಅಂಗನವಾಡಿ ಕಾರ್ಯಕರ್ತೆಯರು, 23 ಸಹಾಯಕಿಯರು, ಹನೂರು 22 ಅಂಗನವಾಡಿ ಕಾರ್ಯಕರ್ತೆಯರು, 24 ಸಹಾಯಕಿಯರು ಹಾಗೂ ಯಳಂದೂರು ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯಲ್ಲಿ 4 ಅಂಗನವಾಡಿ ಕಾರ್ಯಕರ್ತೆಯರು, 8 ಸಹಾಯಕಿಯರು ಸೇರಿದಂತೆ ಒಟ್ಟು 219 ಖಾಲಿ ಹುದ್ದೆಗಳನ್ನು ಭತಿ ಮಾಡಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ವೆಬ್ ಸೈಟ್‌ನಲ್ಲಿ ಜ.9 ರಿಂದ ೆ.7 ರೊಳಗೆ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಚಾಮರಾಜನಗರ ಶಿಶು ಅಭಿವೃದ್ದಿ ಯೋಜನೆ ಕಚೇರಿ ದೂ.ಸಂ 08226-222603, ಸಂತೇಮರಹಳ್ಳಿ ದೂ.ಸಂ 08226-240215, ಕೊಳ್ಳೇಗಾಲ ಮತ್ತು ಹನೂರು ದೂ.ಸಂ 08224-252367, ಗುಂಡ್ಲುಪೇಟೆ ದೂ.ಸಂ 08229-222286 ಹಾಗೂ ಯಳಂದೂರು ಶಿಶು ಅಭಿವೃದ್ದಿ ಯೋಜನೆ ಕಚೇರಿ ದೂ.ಸಂ 08226-240224 ಸಂಪರ್ಕಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net