ಅಂಗನವಾಡಿ ಸಿಬ್ಬಂದಿ ಸೇವೆ ಕಾಯಂಗೊಳಿಸಿ

12 12
Published on

ತುಮಕೂರು: ಗುಜರಾತ್​ ಹೈಕೋರ್ಟ್​ ನೀಡಿರುವ ತೀರ್ಪಿನಂತೆ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರನ್ನು ವರ್ಗ- 3 ಮತ್ತು 4ದ ನೌಕರರು ಎಂದು ಪರಿಗಣಿಸಿ ಸೇವೆಗಳನ್ನು ಕಾಯಂ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ತಕ್ಷಣ ಕ್ರಮವಹಿಸಬೇಕು ಎಂದು ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ರಾಜ್ಯ ಅಧ್ಯೆ ಎಸ್​.ವರಲಕ್ಷಿ$್ಮ ಆಗ್ರಹಸಿದರು.

ನಗರದ ವೀರಸೌಧದಲ್ಲಿ ಮಂಗಳವಾರ ಸಂಘಟಿಸಲಾಗಿದ್ದ ಅಂಗನವಾಡಿ ನೌಕರರ ಜಿಲ್ಲಾ ಸಮಾವೇಶ ಉದ್ಘಾಟಿಸಿ, ಉಪಧನ ಕುರಿತ ಸುಪ್ರೀಂ ಕೋರ್ಟ್​ನ ತೀರ್ಪಿ ಕುರಿತ ಕನ್ನಡದ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿ, ಐಸಿಡಿಎಸ್​ ಕಾರ್ಯಕ್ರಮ 50 ವರ್ಷ ಪೂರೈಸಿದೆ. ಆದರೆ, ಈ ಯೋಜನೆಗೆ ಪ್ರತ್ಯೇಕ ನಿರ್ದೇಶನಾಲಯ ಇಲ್ಲ. ಸರ್ಕಾರ ಈ ತಕ್ಷಣ ಪ್ರತ್ಯೇಕ ನರ್ದೇಶನಾಲಯ ಮಾಡುವಂತೆ ಒತ್ತಾಯಿಸಿದರು.

ಸಂಘದ ಜಿಲ್ಲಾ ಖಜಾಂಚಿ ಬಿ.ಎಸ್​.ಅನುಸೂಯ ಮಾತನಾಡಿ, ಶಿಕ್ಷಣ ಇಲಾಖೆ 4 ವರ್ಷ ಮೇಲ್ಪಟ್ಟ ಮಕ್ಕಳನ್ನು ಸ್ಥಳಾಂತರಿಸುವುದು ಸರಿಯಲ್ಲ. ಅಂಗನವಾಡಿ ಕೇಂದ್ರದಲ್ಲೇ ಪೂರ್ವ ಪ್ರಾಥಮಿಕ ಶಿಕ್ಷಣ ಕೇಂದ್ರವಾಗಿಸಿರುವು ಸ್ವಾಗತಾರ್ಹ ಎಂದರು

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಲ್ಜಾರ್​ಬಾನು ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ನಮಗೆ ನೀಡಲಾದ ಆಶ್ವಾಸನೆಯಂತೆ ಗೌರವಧನ ಮಾಸಿಕ 15000ಕ್ಕೆ ಹೆಚ್ಚಿಸಬೇಕು. ಬಿಎಲ್​ಒ ಮತ್ತಿತರ ಕೆಲಸಗಳಿಂದ ಮುಕ್ತಿಗೊಳಿಸಬೇಕು. ಹಲವು ಬೇಡಿಕೆಗಳ ಅಧಾರದಲ್ಲಿ ಇದೆ ಡಿ.18 ರಂದು ಅಂಗನವಾಡಿ ನೌಕರರು ಪ್ರತಿಭಟನೆ ನಡೆಸಲಿದ್ದಾರೆ ಎಂದರು. ಸಿಐಟಿಯು ಜಿಲ್ಲಾ ಅಧ್ಯಕ್ಷ ಸೈಯದ್​ ಮುಜೀಬ್​, ಉಪಾಧ್ಯಕ್ಷ ಎಸ್​.ಡಿ.ಪಾರ್ವತಮ್ಮ, ಸರೋಜಾ, ವಸಂತಾ, ಪೂಣಮ್ಮ, ಇಂದ್ರಮ್ಮ, ಗಂಗಮ್ಮ, ಜಬೀನಾ, ಗೌರಮ್ಮ, ಶಿವಗಂಗಮ್ಮ, ಪಾರ್ವತಮ್ಮ, ಅಧಿಲಕ್ಷಿ$್ಮ, ವನಜಾಕ್ಷಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net