

ಕಲಬುರಗಿ: ಅಂಗನವಾಡಿ ಕೇಂದ್ರದ ಸಹಾಯಕಿ ಹುದ್ದೆಗೆ ನೇಮಕ ಆದೇಶ ನೀಡಲು ಲಂಚ ಪಡೆದ ಆರೋಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎಫ್‌ಡಿಎ ಲೋಕಾ ಬಲೆಗೆ ಬಿದ್ದಿದ್ದು, ಮಧ್ಯವರ್ತಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಸಹಾಯಕ ಹುದ್ದೆ ಕೊಡಿಸುವುದಾಗಿ ಒಂದು ಲಕ್ಷ ರೂ.ಗೆ ಬೇಡಿಕೆ ಇರಿಸಿದ್ದು, ಮುಂಗಡವಾಗಿ ೧೫ ಸಾವಿರ ರೂ. ಲಂಚ ಪಡೆದ ಆರೋಪದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಥಮ ದರ್ಜೆ ಸಹಾಯಕಿ ಶಿಲ್ಪಾ ಹಾಗೂ ದಲ್ಲಾಳಿ ದೇವಪ್ಪನನ್ನು ಲೋಕಾಯುಕ್ತ ಪೊಲೀಸರ ಬಲೆಗೆ ಬಿದಿದ್ದಾರೆ.
ಸಂತೋಷ ರಾಮಚಂದ್ರ ನೀಡಿದ ದೂರಿನ ಮೇರೆಗೆ ನಗರದ ಇಲಾಖೆ ಕಚೇರಿ ಬಳಿಯೇ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ, ಹಣ ಪಡೆಯುತ್ತಿದ್ದ ಎಫ್‌ಡಿಎ ಶಿಲ್ಪಾ ಹಾಗೂ ಆಕಾಂಕ್ಷಿಗಳನ್ನು ಕರೆ ತರುತ್ತಿದ್ದ ದ¯್ಲÁಳಿ ದೇವಪ್ಪನನ್ನು ಬಂಧಿಸಿz್ದÁರೆ.
ಅAಗನವಾಡಿ ಕೇಂದ್ರಗಳ ಸಹಾಯಕಿ ಹುz್ದೆಗಳ ನೇಮಕಾತಿ ಅರ್ಜಿ ಆಹ್ವಾನಿಸಲಾಗಿತ್ತು. ಸಹಾಯಕಿ ಹುz್ದÉ ಕೊಡಿಸಲು ಶಿಲ್ಪಾ ಸಂತೋಷಗೆ ಒಂದು ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಮೊದಲ ಹಂತದಲ್ಲಿ ೩೦ ಸಾವಿರ ರೂ. ಪಡೆದಿದ್ದರು. ಈ ಬಗ್ಗೆ ಸಂತೋಷ ಲೋಕಾಯುಕ್ತರಿಗೆ ದೂರು ನೀಡಿದ್ದರು.
ಗುರುವಾರ ನೇಮಕಾತಿಯ ಆದೇಶ ಪತ್ರ ನೀಡುವಾಗ ಶಿಲ್ಪಾ ಅವರು ಸಂತೋಷರಿAದ ೧೫ ಸಾವಿರ ರೂ. ಲಂಚ ಪಡೆಯುತ್ತಿz್ದÁಗ ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದು, ತಡರಾತ್ರಿವರೆಗೆ ವಿಚಾರಣೆ ನಡೆಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.
ಪ್ರತಿ ಆಕಾಂಕ್ಷಿಗೆ ೫೦೦ರಿಂದ ೧,೦೦೦ ರೂ. ಪಡೆಯುತ್ತಿದ್ದ ದಲ್ಲಾಳಿ ದೇವಪ್ಪ ದಾಳಿಯ ವೇಳೆ ಲೋಕಾಯುಕ್ತ ಪೊಲೀಸರನ್ನೇ ಹೆದರಿಸುವ ಪ್ರಯತ್ನ ಮಾಡಿದ್ದ ಎಂದು ತಿಳಿದು ಬಂದಿದೆ. ಲೋಕಾ ಪೊಲೀಸರಿಗೆ ನನಗೆ ಲೀಡರ್‌ಗಳ ಪರಿಚಯವಿದೆ ಎಂದು ಹೆದರಿಸಲಯ ಯತ್ನಿಸಿದ್ದು, ಬಂಧಿಸಿ ಜೈಲಿಗೆ ಕಳಿಸಲಾಗಿದೆ.
ಲೋಕಾಯುಕ್ತ ಎಸ್‌ಪಿ ಬಿ.ಕೆ.ಉಮೇಶ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಅರುಣಕುಮಾರ, ಸಿಬ್ಬಂದಿ ಮಸೂದ್, ಮಲ್ಲಿನಾಥ, ಬಸವರಾಜ, ಸಂತೋಷಿ, ಮಧುಮತಿ ಹಾಗೂ ಪ್ರಮೋದ್ ಅವರ ತಂಡ ಕಾರ್ಯಾಚರಣೆಯಲ್ಲಿ ಇತ್ತು.