ಅಂಗನವಾಡಿ ಮಕ್ಕಳಿಗೆ ಪರಿಕರ ವಿತರಣೆ

Published on

ಯಳಂದೂರು: ತಾಲೂಕು ರೋಟರಿ ಗ್ರೀನ್ ವೇ ಸಂಸ್ಥೆ ವತಿಯಿಂದ ಗೌಡಹಳ್ಳಿ ಗ್ರಾಮದ 1ನೇ ಅಂಗನವಾಡಿ ಕೇಂದ್ರಕ್ಕೆ ಚೇರ್ ಹಾಗೂ ಲೇಖನ ಪರಿಕರಗಳನ್ನು ನೀಡಲಾಯಿತು.

ಸಂಸ್ಥೆಯ ಅಧ್ಯಕ್ಷ ವೈ.ಜಿ. ನಿರಂಜನಸ್ವಾಮಿ ಮಾತನಾಡಿ, ನಮ್ಮ ಸಂಸ್ಥೆ ವತಿಯಿಂದ ಗೌಡಹಳ್ಳಿ ಅಂಗನವಾಡಿ ಕೇಂದ್ರದ ಎಲ್‌ಕೆಜಿ ಮಕ್ಕಳಿಗೆ ಚೇರ್, ಸ್ಲೇಟ್ ಸೇರಿದಂತೆ ಇತರ ಲೇಖನ ಸಾಮಗ್ರಿಗಳನ್ನು ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕೇಂದ್ರಗಳಿಗೂ ಇದನ್ನು ನೀಡುವ ಉದ್ದೇಶವಿದೆ. ಇದರೊಂದಿಗೆ ಸಂಸ್ಥೆ ವತಿಯಿಂದ ಅನೇಕ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು. ಆರೋಗ್ಯ ಶಿಬಿರಗಳು, ರಕ್ತದಾನ ಸೇರಿದಂತೆ ಇತರ ಕೆಲಸಗಳನ್ನು ಮಾಡಲಾಗುವುದು ಎಂದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪುಟ್ಟರಾಜು, ಖಜಾಂಚಿ ರವಿ, ಡಾ.ಸಾಗರ್, ವಿಜಿ, ನಟರಾಜು, ವೈ.ಬಿ.ಶಿವಕುಮಾರ್, ರುದ್ರಯ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net