

ಕೊಡೇಕಲ್: ಅಂಗನವಾಡಿ ಕೇಂದ್ರಗಳು ಪ್ರಾಥಮಿಕ ಶಾಲೆಗೆ ಭದ್ರ ಬುನಾದಿಯಾಗಿವೆ ಎಂದು ಕೊಡೇಕಲ್ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗೌತಮ ಕುಲಕರ್ಣಿ ಹೇಳಿದರು.
ನಾರಾಯಣಪುರ ಗ್ರಾಮದ ಅಂಗನವಾಡಿ ಕೇಂದ್ರವೊAದರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶಿ ಅಭಿವೃದ್ದಿ ಯೋಜನೆ ಮತ್ತು ಅಜಿಂಪ್ರೇಮಜಿ ಫೌಂಡೇಷನ್ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡ ಬಾಲಮೇಳ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂಗನವಾಡಿ ಕೇಂದ್ರಗಳು ಪೂರ್ವ ಪ್ರಾಥಮಿಕ ಶಿಕ್ಷಣ ಮತ್ತು ಅಪೌಷ್ಟಿಕತೆಯನ್ನು ಹೋಗಲಾಡಿಸುವುದರ ಜತೆಗೆ ಮಕ್ಕಳಿಗೆ ಉತ್ತಮ ಆರೋಗ್ಯ ಮತ್ತು ಶಿಕ್ಷಣ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಮಕ್ಕಳಿಗೆ ಚಿತ್ರಗಳ ಗುರುತಿಸುವಿಕೆ, ಗ್ರಹಿಸುವಿಕೆ, ತಾಳ್ಮೆ, ಸೇರಿ ಇನ್ನಿತರ ಕ್ರಿಯಾತ್ಮಕ ಚಟುವಟಿಕೆಗಳನ್ನು ಅಭ್ಯಾಸದ ಜತೆಗೆ ಮಕ್ಕಳಿಗೆ ನೀಡುವ ಪೌಷ್ಟಿಕ ಅಂಶವುಳ್ಳ ಆಹಾರ ಬೇರೆ ಕಡೆಗಳಲ್ಲಿ ಹಣಕೊಟ್ಟರು ಕೂಡ ಸಿಗುವುದಿಲ್ಲ ಅಪೌಷ್ಟಿಕತೆ ವಿರುದ್ಧ ಹೋರಾಟ ಮಾಡುತ್ತಾ ಮಕ್ಕಳಿಗೆ, ಗರ್ಭಿಣಿಯರು, ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡುತ್ತಾ ಆರೋಗ್ಯಯುತ ಸಮಾಜ ನಿರ್ಮಾಣ ಮಾಡುತ್ತಿರುವ ಅಂಗನವಾಡಿ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ನಾರಾಯಣಪುರ ವಲಯ ಮೇಲ್ವಿಚಾರಕಿ ಗುರುದೇವಿ ಹಿರೇಮಠ ಮಾತನಾಡಿ ಮಾತನಾಡಿದರು. ತಿಪ್ಪಣ್ಣ ರೋಡಲಬಂಡಾ, ಡಾ.ಬೀರಪ್ಪ, ಅಂದಾನಪ್ಪ ಚಿನಿವಾಲರ, ಸಂಗನಬಸ್ಸು ಚಟ್ಟೆರ, ಆಂಜನೇಯ ಗೊಳಸಂಗಿ, ರಮೇಶ ಕೊಳೂರು, ವೆಂಕೋಬ ಕೂಚಬಾಳ, ಯಂಕಪ್ಪ, ಮಲ್ಲು ಮೇಸ್ತಕ, ಗದ್ದೆಪ್ಪ ಬಿರಾದಾರ, ಭರ್ಮಪ್ಪ ಕಂಬಳಿ, ಎಪಿಎಫ್‌ನ ಹುಲಗಪ್ಪ, ಶಿರೋಮಣಿ, ವಿಜಯಲಕ್ಷ್ಮೀ, ನಾಗಮ್ಮ, ಶಾಂತ ಇತರರಿದ್ದರು.
ಕೊಡೇಕಲ್ ವಲಯ ಮೇಲ್ವಿಚಾರಕಿ ಸುನಂದಾ ಪ್ರಾಸ್ತಾವಿಕ ಮಾತನಾಡಿದರು. ಭೀಮಬಾಯಿ ಪ್ರಾರ್ಥಿಸಿದರು, ಶಾಂತ ವಂದಿಸಿದರು. ಜ್ಯೋತಿ ನಿರೂಪಣೆ ಮಾಡಿದರು.