

ಕಲಬುರಗಿ: ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ವೇತನ ಹೆಚ್ಚಿಸಬೇಕು, ಗ್ರಾÈಚುಟಿ ನೀಡಬೇಕು, ಅಂಗನವಾಡಿ ಕೇಂದ್ರಗಳನ್ನು ಮಾಂಟೆಸ್ಸರಿ ಎಂದು ಘೋಷಿಸಿ, ಮೇಲ್ದರ್ಜೆಗೇರಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಬೆಂಗಳೂರಿನಲ್ಲಿ ಮಾ.೭ರಂದು ಬೃಹತ್ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಕಾರ್ಯಾಧ್ಯಕ್ಷೆ ಶಾಂತಾ ಘಂಟಿ ತಿಳಿಸಿದರು.
ಐಸಿಡಿಎಸ್‌ಗೆ ಪ್ರತ್ಯೇಕ ನಿರ್ದೇಶನಾಲಯ ಮಾಡಬೇಕು. ಕಾಂಗ್ರೆಸ್‌ನವರು ಚುನಾವಣೆಗೆ ಮುನ್ನ ಘೋಷಿಸಿದಂತೆ ೫ನೇ ಗ್ಯಾರಂಟಿಯಾದ ೧೫ ಸಾವಿರ ರೂ. ವೇತನ ಜಾರಿ ಮಾಡಬೇಕು. ಇಡೀ ರಾಜ್ಯದಲ್ಲಿ ಏಕರೂಪದ ಆಹಾರ ನೀಡದೆ, ಆಯಾ ಸ್ಥಳೀಯ ಆಹಾರವನ್ನು ಪೂರೈಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಕಾರ್ಯಕರ್ತೆ, ಸಹಾಯಕಿಯರನ್ನು ವರ್ಗ ೩, ೪ ಎಂದು ಪರಿಗಣಿಸಿ ಕಾಯಂ ಮಾಡಬೇಕು, ಎಲ್‌ಕೆಜಿ, ಯುಕೆಜಿ ಘೋಷಿಸಿ ಪ್ರತ್ಯೇಕ ಹಣ ಮೀಸಲು ಇಡಬೇಕು, ಚುನಾವಣೆಗಳ ಕೆಲಸದಿಂದ ಮುಕ್ತಗೊಳಿಸಬೇಕು, ಅಂಗನವಾಡಿ ಆಹಾರಕ್ಕೆ ಜಿಎಸ್‌ಟಿ ಹಾಕಬಾರದು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಮನವಿ ಮಾಡಿದರು.
ಬೃಹತ್ ಮುಷ್ಕರವನ್ನು ರಾಜ್ಯ ಸರ್ಕಾರದ ವಿರುದ್ಧ ಹಮ್ಮಿಕೊಂಡಿದ್ದು, ಸುಮಾರು ೫೦ ಸಾವಿರ ಕಾರ್ಯಕರ್ತೆಯರು, ಸಹಾಯಕಿಯರು ಪಾಲ್ಗೊಳ್ಳಲಿದ್ದು, ಕಲಬುರಗಿ ಜಿಲ್ಲೆಯಿಂದ ಐದು ಸಾವಿರ ಜನ ಭಾಗವಹಿಸಲಿz್ದೆÃವೆ. ಮಾ.೭ರಂದು ಘೋಷಣೆ ಆಗದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ತಿಳಿಸಿದರು.
ಪ್ರಮುಖರಾದ ಗೌರಮ್ಮ ಪಾಟೀಲ್, ಶೇಖಮ್ಮ ಕುರಿ, ಮಂಜುಳಾ, ದೇವಮ್ಮ, ರತ್ನ, ರಾಧ, ಸಾಬಮ್ಮ ಇತರರಿದ್ದರು.