

ಹೊಳೆನರಸೀಪುರ: ಅಂಬೇಡ್ಕರ್ ನಗರದ ಅಂಗನವಾಡಿ ಕೇಂದ್ರ ಎ ಸರಿಯಾದ ನಿರ್ವಹಣೆ ಕೊರತೆ ಹಿನ್ನೆಲೆಯಲ್ಲಿ ಸಾರ್ವಜನಿಕರ ದೂರಿನ ಮೇರೆಗೆ ತಾಲೂಕು ಪ್ರಭಾರಿ ಸಿಡಿಪಿಓ ಭಾಗ್ಯಮ್ಮ ಭೇಟಿ ನೀಡಿ ಪರಿಶೀಲನೆ ನಡೆಸಿರು.
ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ಅಂಗನವಾಡಿ ಕೇಂದ್ರದ ಅವ್ಯವಸ್ಥೆ ಎದ್ದು ಕಾಣುತ್ತಿತ್ತು . ಪರಿಶಿಷ್ಟ ಜಾತಿ ಮಕ್ಕಳೇ ಹೆಚ್ಚು ಇರುವ ಕೇಂದ್ರ. ಶೀತಿಲಗೊಂಡಿರುವ ಕಟ್ಟಡ ಮಳೆ ಬಂದರೆ ನೀರು ಸೋರುತ್ತದೆ, ಶೀತಪೀಡಿತ ಕೊಠಡಿಯಾಗಿದೆ ಚಿಕ್ಕ ಕೊಠಡಿಯಲ್ಲೇ ಗ್ಯಾಸ್ ಸಿಲಿಂಡರ್ ಸ್ಟವ್ ಆಹಾರ ಸಾಮಗ್ರಿಗಳು ಪಾತ್ರೆಗಳು ಕುರ್ಚಿ ಇತರೆ ಸಾಮಗ್ರಿಗಳು ಜೊತೆಯಲ್ಲೇ ಪುಟಾಣಿ ಮಕ್ಕಳು ಕುಳಿತುಕೊಳ್ಳಬೇಕು ಇಂಥ ಆಹಾ ಅವ್ಯವಸ್ಥೆಯಲ್ಲಿ ಅಂಗನವಾಡಿ ಮುನ್ನಡೆಯುತ್ತಿರುವುದು ಇಲಾಖೆಯ ಕಾರ್ಯನಿರ್ವಹಣೆಗೆ ಸಾಕ್ಷಿಯಾಗಿದೆ. ಈ ಅಂಗನವಾಡಿ ಕೇಂದ್ರಕ್ಕೆ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲ ಮುಖ್ಯವಾಗಿ ನೀರಿನ ವ್ಯವಸ್ಥೆ ವಿದ್ಯುತ್ ಸೌಲಭ್ಯ ಇಲ್ಲವೇ ಇಲ್ಲ ಇಂತಹ ಅವ್ಯವಸ್ಥೆಯಲ್ಲಿ ಅಂಗನವಾಡಿ ಕೇಂದ್ರ ಮುನ್ನಡೆಯುತ್ತಿರುವುದು ಭಾವಿ ಪ್ರಜೆಗಳಾದ ಮಕ್ಕಳ ಲಾಲನೆ ಪೋಷಣೆ ನಿರೀಕ್ಷಿಸಲು ಸಾಧ್ಯವೇ ಎಂದು ಸಾರ್ವಜನಿಕರು ಅಧಿಕಾರಿ ಹಾಗೂ ಕಾರ್ಯಕರ್ತೆಗೆ ಪ್ರಶ್ನೆ ಮಾಡಿದ ಸಂದರ್ಭ ನಡೆಯಿತು.
ಅಂಗನವಾಡಿ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಬೇರೆ ಸ್ಥಳದಲ್ಲಿ ನಡೆಸಲಾಗುತ್ತದೆ ಈ ಕಟ್ಟಡು ಮುರಿದು ಬೀಳುವ ಹಂತದಲ್ಲಿದೆ ಆದ್ದರಿಂದ ನಮ್ಮ ಮಕ್ಕಳ ಜೀವ ರಕ್ಷಣೆಗೆ ಯಾರು ಹೊಣೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿ ಬೇರೆ ಸ್ಥಳಕ್ಕೆ ಸ್ಥಳಾಂತರಿಸಿ ಕೊಡುವಂತೆ ಮನವಿ ಮಾಡಿದರು ಸಿ ಡಿ ಪಿ ಓ ಉಸ್ತುವಾರಿ ಭಾಗ್ಯಮ್ಮ ಅವರು ತಮ್ಮ ಮನವಿಗೆ ಸ್ಪಂದಿಸುವುದಾಗಿ ತಿಳಿಸಿದರು.
ಪ್ರಬಾರಿ ಸಿಡಿಪಿಓ ಭಾಗ್ಯಮ್ಮ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಪುಷ್ಪ ಅವರಿಗೆ ತರಾಟೆಗೆ ತೆಗೆದುಕೊಂಡರು. ಅಂಗನವಾಡಿ ಕೇಂದ್ರದ ಶುಚಿತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಅವರು ತಮ್ಮ ಅಂಗನವಾಡಿ ಕೇಂದ್ರಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎಂದು ತಾಕಿತು ಮಾಡಿದರು ಇದಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡುವಂತೆ ಸೂಪರ್ವೈಸರ್ ಸ್ಮಿತಾ ದೊಡ್ಮನೆ ಅವರಿಗೆ ಸೂಚನೆ ನೀಡಿದರು.
ತಾಲೂಕಿನ ಯಾವುದೇ ಅಂಗನವಾಡಿ ಕೇಂದ್ರಗಳಲ್ಲಿ ಲೋಪ ಕಂಡು ಬಂದರೆ ಅವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು ಶಿಶುಗಳ ಲಾಲನೆ ಪಾಲನೆ ಬಾಣಂತಿ ಗರ್ಭಿಣಿಯರ ಘೋಷಣೆ ಇವೆಲ್ಲವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಬೇಕು ಇದಕ್ಕೆ ಸಂಬಂಧಿಸಿ ದಂತೆ ಸಾರ್ವಜನಿಕರಿಂದ ದೂರು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಂಬೇಡ್ಕರ್ ನಗರದ ಅಂಗನವಾಡಿ ಕೇಂದ್ರ ಎ ಕೇಂದ್ರವನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಿ ಸೂಕ್ತ ರೀತಿಯಲ್ಲಿ ನಡೆಯುವಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು
ಇದೇ ಸಂದರ್ಭದಲ್ಲಿ ಪತ್ರಿಕಾ ವರದಿಗಾರರೊಂದಿಗೆ ಮಾತನಾಡುತ್ತಾ ತಾಲೂಕಿನಲ್ಲಿ ಶೀತಿಲಗೊಂಡಿರುವ ಕಟ್ಟಡಗಳನ್ನು ಮರು ನಿರ್ಮಾಣ ಮಾಡಲು ಇಲಾಖೆಗೆ ವರದಿ ಸಲ್ಲಿಸಲಾಗಿದೆ. ಕೆಲವು ಕೊಟ್ಟರಗಳನ್ನು ದುರಸ್ತಿಗೊಳಿಸಲು ಕೂಡ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.