ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಸನ್ಮಾನ

CTD 13 Sanmana--06
Published on

ಚಿತ್ರದುರ್ಗ:ಜಿಪಂ ಸಭಾಂಗಣದಲ್ಲಿ ಗುರುವಾರ ಶಿಶು ಅಭಿವೃದ್ಧಿ ಯೋಜನೆಯಡಿ ಉತ್ತಮ ಸೇವೆ ಸಲ್ಲಿಸಿದ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಸನ್ಮಾನಿಸಲಾಯಿತು.

ಚಿತ್ರದುರ್ಗ ವಿಭಾಗದ ಮಂಜುಳಾ, ವೈ.ಸಿದ್ಧಗಂಗಮ್ಮ, ರಾಜಮ್ಮ, ಭರಮಸಾಗರದ ದೇವಕವ್ವ ಭೀಮಕ್ಕನವರ್, ಎಸ್.ಶೋಭಾ, ರೇಣುಕಮ್ಮ, ಚಳ್ಳಕೆರೆಯ ಜಯಶ್ರೀ, ಸರೋಜಮ್ಮ, ಅನಿತಮ್ಮ, ಹಿರಿಯೂರಿನ ಶಾರದಮ್ಮ, ಚಂದ್ರಕಲಾ, ಮಂಜುಳಾ, ಹೊಳಲ್ಕೆರೆಯ ರೇಣವ್ವ ಎಲ್ ಅಮಟೇನವರ್, ಶಾಂತಕುಮಾರಿ, ಈ.ದೇವಮ್ಮ, ಹೊಸದುರ್ಗದ ಶಬನಾ, ಶೋಭಾ, ಗಿರಿಜಮ್ಮ, ಮೊಳಕಾಲ್ಮ್ಮೂರಿನ ಲೀಲಾಬಾಯಿ, ಶಂಷದ್, ಅಕ್ಕಮ್ಮ ಸನ್ಮಾನ ಸ್ವೀಕರಿಸಿದರು.

ಜಿಪಂ ಸಿಇಒ ಎಂ.ಎಸ್.ದಿವಾಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಇಲಾಖೆ ಅಧಿಕಾರಿ ಪವಿತ್ರಾ, ಡಿಸಿಪಿಒ ಸವಿತಾ, ಸಿಡಿಪಿಒ ಸುಧಾ, ಜಿಲ್ಲಾ ನಿರೂಪಣಾಧಿಕಾರಿ ವಿಜಯಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net