

ಹುಮನಾಬಾದ್: ಮಾನಸಿಕ ಅಸ್ವಸ್ಥರನ್ನು ಪುನರ್‌ವಸತಿ ಕಲ್ಪಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಅಗಾಧ ಎಂದು ಆರ್ಬಿಟ್ ಸಂಸ್ಥೆ ವ್ಯವಸ್ಥಾಪಕಿ ಸಿಸ್ಟರ್ ವಿಲ್ಮಾ ಮ್ಯಾಥ್ಯೂ ಹೇಳಿದರು.
ಪಟ್ಟಣದ ಹೊರವಲಯದಲ್ಲಿ ಆರ್ಬಿಟ್ ಸಂಸ್ಥೆ, ಅಜೀಮ್ ಪ್ರೇಮ್‌ಜಿ ಫೌಂಡೇಷನ್ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಮಾನಸಿಕ ಅಸ್ವಸ್ಥರನ್ನು ಸಮುದಾಯ ಆಧಾರಿತವಾಗಿ ಪುನರ್ವಸತಿ ಕಲ್ಪಿಸಲು ಅಂಗನವಾಡಿ ಕಾರ್ಯಕರ್ತೆಯರಿಗೆ ಆಪ್ತ ಸಮಾಲೋಚನೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಗುವಿನ ಜೀವನಕ್ಕೆ ಅಡಿಪಾಯ ಹಾಕುವ ಜವಾಬ್ದಾರಿ ನಿಭಾಯಿಸುತ್ತಿದ್ದೀರಿ. ಸರ್ಕಾರದ ಉದ್ದೇಶ ಈಡೇರಿಸುವ ಜತೆಗೆ ಮಗುವಿನ ಜೀವನ ರೂಪಿಸುವ ಕಾರ್ಯ ಇದಾಗಿದೆ ಎಂದರು.
ಅಂಗನವಾಡಿಯ ೪೮ ಕಾರ್ಯಕರ್ತೆಯರು ಭಾಗವಹಿಸಿ ತರಬೇತಿ ಪಡೆದರು. ಸಂಸ್ಥೆ ಸಹ ನಿರ್ದೇಶಕ ವಿಜಯಕುಮಾರ, ಸಂಪನ್ಮೂಲ ವ್ಯಕ್ತಿ ಸಂತೋಷ, ಪ್ರೇಮ್‌ಜಿ ಫೌಂಡೇಷನ್ ಪ್ರತಿನಿಧಿ ವೀರೇಶ ಇತರರಿದ್ದರು. ಪೂಜಾ, ಮಮತಾ ಪ್ರಾರ್ಥಿಸಿದರು. ಪ್ರವೀಣಕುಮಾರ ಸ್ವಾಗತಿಸಿದರು. ಹನುಮಂತ ವಂದಿಸಿದರು. ಅರುಣಕುಮಾರ ರಂಜೇರಿ ನಿರೂಪಣೆ ಮಾಡಿದರು.