ಅಂಗನವಾಡಿ ಕಾರ‌್ಯಕರ್ತೆಯರ ಪ್ರತಿಭಟನೆ

CTD 27 STRIKE (1)
Published on

ಚಿತ್ರದುರ್ಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಅಂಗನವಾಡಿ ಕಾರ‌್ಯಕರ್ತೆಯರು,ಸಹಾಯಕಿಯರ ಫೆಡರೇಷನ್ ಜಿಲ್ಲಾ ಸಮಿತಿ ಹಾ ಗೂ ಎಐಟಿಯುಸಿ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ಅಂಗನವಾಡಿ ಕಾರ‌್ಯಕರ್ತೆಯರು ಮತ್ತು ಸಹಾಯಕಿಯರು ಪ್ರತಿಭಟಿಸಿ ಜಿಲ್ಲಾ ಧಿಕಾರಿ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಅವರಿಗೆ ಮನವಿ ಸಲ್ಲಿಸಿದರು.

ಕಮ್ಯುನಿಸ್ಟ್ ಕಚೇರಿಯಿಂದ ಒನಕೆ ಓಬವ್ವ ವೃತ್ತಕ್ಕೆ ಮೆರವಣಿಗೆ ಮೂಲಕ ಆಗಮಿಸಿದ ಕಾರ‌್ಯಕರ್ತೆಯರು,ಸಹಾಯಕಿಯರು,ವೇತನ ಹೆಚ್ಚಳ ಸಹಿತ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಕಾರ‌್ಯಕರ್ತೆಯರಿಗೆ ಕೊಟ್ಟಿರುವ ಮೊಬೈಲ್‌ಗಳ ಗುಣಮಟ್ಟ ಕಳಪೆಯಾಗಿವೆ. ಅವುಗಳನ್ನು ಹಿಂಪಡೆದು ಉತ್ತಮ ಗುಣಮಟ್ಟದ ಮೊಬೈಲ್‌ಗಳನ್ನು ಪೂರೈಸಬೇಕು.

ಗೌರವ ಧನ ಹೆಚ್ಚಿಸಬೇಕು.ನಿವೃತ್ತರಾದವರಿಗೆ 2 ಲಕ್ಷ ರೂ.ಇಡಿಗಂಟು ಹಾಗೂ ಮಾಸಿಕ 5 ಸಾವಿರ ರೂ.ಪಿಂಚಣಿ ಕೊಡ ಬೇಕು. ಆರೋಗ್ಯ ಇಲಾಖೆ ಸೇರಿ ವಿವಿಧ ಇಲಾಖೆಗಳ ಕರ್ತವ್ಯಗಳಿಗೆ ನಮ್ಮನ್ನು ನಿಯೋಜಿಸ ಬಾರದು. ಅಂಗನವಾಡಿಗಳಿಗೆ ಪೂರೈಕೆಯಾಗುತ್ತಿ ರುವ ಮೊಟ್ಟೆಗಳ ಗುಣಮಟ್ಟ ಸರಿ ಇಲ್ಲ.
ಆದ್ದರಿಂದ ಟೆಂಡರ್ ಕೈ ಬಿಟ್ಟು ಮೊಟ್ಟೆ ಖರೀದಿ ಹೊಣೆಯನ್ನು ಬಾಲ ವಿಕಾಸ ಸಮಿತಿಗೆ ವಹಿಸಬೇಕು.ಅನೇಕ ಜಿಲ್ಲೆ ಗಳಲ್ಲಿ ಕಳೆದ 8ತಿಂ ಗಳಿಂದ

ಅಂಗನವಾಡಿಗಳ ಕಟ್ಟಡ ಬಾಡಿಗೆ ಪಾವತಿಸಿಲ್ಲ,ಆದ್ದರಿಂದ ಸರ್ಕಾರ ಕೂಡಲೇ ಬಾಡಿಗೆ ಹಣ ಬಿಡುಗಡೆ ಮಾಡ ಬೇಕು. ದೀರ್ಘ ಕಾಲ ಒಂದೆಡೆ ಕಾರ‌್ಯನಿರ್ವಹಿಸುತ್ತಿರುವ ಅಂಗನವಾಡಿ ಮೇಲ್ವಿಚಾರಕಿಯರು,ಸಿಬ್ಬಂದಿಯನ್ನು ವರ್ಗಾಯಿಸ ಬೇಕೆಂದು ಆಗ್ರಹಿಸಿದರು.

ಎಐಟಿಯುಸಿ ಪ್ರಮುಖರಾದ ಜಿ.ಸಿ.ಸುರೇಶ್‌ಬಾಬು,ಸಿ.ವೈ.ಶಿವರುದ್ರಪ್ಪ,ದೊಡ್ಡ ಉಳ್ಳಾರ್ತಿ ಕರಿಯಣ್ಣ,ಬಿ.ಬಸವರಾಜಪ್ಪ,ಟಿ.ಆರ್. ಉಮಾ ಪತಿಕೆ. ಇ.ಸತ್ಯಕೀರ್ತಿ,ಜಾಫರ್‌ಶರೀಫ್,ಎನ್.ಸಿ.ಕುಮಾರಸ್ವಾಮಿ,ಅಮಿನಾಬಿ,ಎಸ್.ಸಿ.ಕುಮಾರ್,ಎಂ.ಬಿ.ಜಯದೇವ ಮೂರ್ತಿ,ಫೆಡರೇಷನ್ ಜಿಲ್ಲಾಧ್ಯಕ್ಷೆ ಭಾಗ್ಯಮ್ಮ,ಜಮುನಾಬಾಯಿ,ವಿನೋದಮ್ಮ,ಸಾವಿತ್ರಮ್ಮ,ರಾಧಮ್ಮ,ರತ್ನಮ್ಮ,ಮಂಜುಳಮ್ಮ,ಆರ್.ವೇದಾವತಿ,ಎಚ್.ಗೌರಮ್ಮ,ರಜೀಯಾಬಿ,ಸುಮಿತ್ರಾಬಾಯಿ,ಗೀತಾಂಜಲಿ,ಬಿ.ರೂಪಾ,ಮಹೇಶ್ವರಿ,ಸಾಜೀದಾ,ಗಂಗಮ್ಮ,ಕೆ.ಟಿ.ಸುಜಾತ,ತಿಪ್ಪಮ್ಮ,

ಯೋಶಧಮ್ಮ,ಟಿ.ಪಿ.ನಿರ್ಮಲಾ,ಆರ್.ಚಿಂತಾಮಣಿ,ಕೆ.ಕೆಂಚಮ್ಮ,ಎಂ.ವಿ.ಜಯಮ್ಮ,ಶಬಿರಾಬಾನು,ಕೆ.ಕರಿಯಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net