ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

application
Published on

ಚಾಮರಾಜನಗರ: ಚಾಮರಾಜನಗರ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಖಾಲಿ ಇರುವ 11 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 23 ಸಹಾಯಕಿಯರ ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಚಂದುಕಟ್ಟೆಮೋಳೆ ಅಂಗನವಾಡಿ ಕೇಂದ್ರ (ಇತರೆ), ಸೋಮವಾರಪೇಟೆ 3ನೇ ಅಂಗನವಾಡಿ ಕೇಂದ್ರ (ಪರಿಶಿಷ್ಟ ಜಾತಿ), ಮಲೆಯೂರಿನ 2ನೇ ಅಂಗನವಾಡಿ ಕೇಂದ್ರ (ಇತರೆ), ದೇವಾಂಗ ಬೀದಿಯ 3ನೇ ಅಂಗನವಾಡಿ ಕೇಂದ್ರ (ಪರಿಶಿಷ್ಟ ಪಂಗಡ), ಕೆ.ಪಿ ಮೊಹಲ್ಲಾ 1ನೇ ಅಂಗನವಾಡಿ ಕೇಂದ್ರ (ಇತರೆ), ರಾಮಸಮುದ್ರ 7ನೇ ಅಂಗನವಾಡಿ ಕೇಂದ್ರ (ಇತರೆ), ರಾಮಸಮುದ್ರ 8ನೇ ಅಂಗನವಾಡಿ ಕೇಂದ್ರ (ಇತರೆ), ದೊಡ್ಡಹಳ್ಳ ಅಂಗನವಾಡಿ ಕೇಂದ್ರ (ಇತರೆ) (1ನೇ ಬಾರಿ ಮರು ಪ್ರಕಟಣೆ), ಬಿ.ಜಿ ಕಾಲೋನಿ ಅಂಗನವಾಡಿ ಕೇಂದ್ರ (ಪರಿಶಿಷ್ಟ ಜಾತಿ) (1ನೇ ಬಾರಿ ಮರು ಪ್ರಕಟಣೆ), ಉಪ್ಪಾರಬೀದಿ 4ನೇ ಅಂಗನವಾಡಿ ಕೇಂದ್ರ (ಇತರೆ) ಹಾಗೂ ಕುಲಗಾಣ 2ನೇ ಅಂಗನವಾಡಿ ಕೇಂದ್ರ (ಪರಿಶಿಷ್ಟ ಜಾತಿ) ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯಕರ್ತೆಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಸೋಮವಾರಪೇಟೆ 3ನೇ ಅಂಗನವಾಡಿ ಕೇಂದ್ರ (ಪರಿಶಿಷ್ಟ ಜಾತಿ), ನಂಜೆದೇವನಪುರ 2ನೇ ಅಂಗನವಾಡಿ ಕೇಂದ್ರ (ಇತರೆ), ಯಾನಗಹಳ್ಳಿ 4ನೇ ಅಂಗನವಾಡಿ ಕೇಂದ್ರ (ಪರಿಶಿಷ್ಟ ಪಂಗಡ), ದೊಡ್ಡಹಳ್ಳ ಅಂಗನವಾಡಿ ಕೇಂದ್ರ (ಇತರೆ) (1ನೇ ಬಾರಿ ಮರು ಪ್ರಕಟಣೆ), ಗೋಡೆಮಡು ಅಂಗನವಾಡಿ ಕೇಂದ್ರ (ಪರಿಶಿಷ್ಟ ಪಂಗಡ), ತಮಿಳು ಕೇಂದ್ರ ಅಂಗನವಾಡಿ ಕೇಂದ್ರ (ಇತರೆ) (2ನೇ ಬಾರಿ ಮರು ಪ್ರಕಟಣೆ), ಹೊಸಪೋಡು ಅಂಗನವಾಡಿ ಕೇಂದ್ರ (ಪರಿಶಿಷ್ಟ ಪಂಗಡ) (1ನೇ ಬಾರಿ ಮರು ಪ್ರಕಟಣೆ), ರಾಮಸಮುದ್ರ 9ನೇ ಅಂಗನವಾಡಿ ಕೇಂದ್ರ (ಪರಿಶಿಷ್ಟ ಜಾತಿ), ದೇವಲಾಪುರ ಅಂಗನವಾಡಿ ಕೇಂದ್ರ (ಪರಿಶಿಷ್ಟ ಜಾತಿ), ಮೂಡ್ನಾಕೂಡು 3ನೇ ಅಂಗನವಾಡಿ ಕೇಂದ್ರ (ಪರಿಶಿಷ್ಟ ಜಾತಿ), ಮೂಡ್ಲುಪುರ ಅಂಗನವಾಡಿ ಕೇಂದ್ರ (ಇತರೆ), ಬೊಮ್ಮನಹಳ್ಳಿ ಅಂಗನವಾಡಿ ಕೇಂದ್ರ (ಇತರೆ), ಹರದನಹಳ್ಳಿ 2ನೇ ಅಂಗನವಾಡಿ ಕೇಂದ್ರ (ಇತರೆ) (1ನೇ ಬಾರಿ ಮರು ಪ್ರಕಟಣೆ), ಬೆಟ್ಟದಪುರ 1ನೇ ಅಂಗನವಾಡಿ ಕೇಂದ್ರ (ಇತರೆ) (3ನೇ ಬಾರಿ ಮರು ಪ್ರಕಟಣೆ), ಬೀಡಿಕಾಲೋನಿ 2ನೇ ಅಂಗನವಾಡಿ ಕೇಂದ್ರ (ಇತರೆ) (1ನೇ ಬಾರಿ ಮರು ಪ್ರಕಟಣೆ), ಗಾಳಿಪುರ 5ನೇ ಅಂಗನವಾಡಿ ಕೇಂದ್ರ (ಇತರೆ) (1ನೇ ಬಾರಿ ಮರು ಪ್ರಕಟಣೆ), ರಾಮಸಮುದ್ರ 6ನೇ ಅಂಗನವಾಡಿ ಕೇಂದ್ರ (ಇತರೆ) (1ನೇ ಬಾರಿ ಮರು ಪ್ರಕಟಣೆ), ಚೆನ್ನಿಪುರದಮೋಳೆ 1ನೇ ಅಂಗನವಾಡಿ ಕೇಂದ್ರ (ಇತರೆ) (1ನೇ ಬಾರಿ ಮರು ಪ್ರಕಟಣೆ), ಶಿವಪುರ 3ನೇ ಅಂಗನವಾಡಿ ಕೇಂದ್ರ (ಇತರೆ) (1ನೇ ಬಾರಿ ಮರು ಪ್ರಕಟಣೆ), ಅಹಮದ್ ನಗರ 2ನೇ ಅಂಗನವಾಡಿ ಕೇಂದ್ರ (ಇತರೆ) (1ನೇ ಬಾರಿ ಮರು ಪ್ರಕಟಣೆ), ಮುಕ್ಕಡಹಳ್ಳಿ 2ನೇ ಅಂಗನವಾಡಿ ಕೇಂದ್ರ (ಪರಿಶಿಷ್ಟ ಜಾತಿ), ಬಸವಾಪುರ 2ನೇ ಅಂಗನವಾಡಿ ಕೇಂದ್ರ (ಪರಿಶಿಷ್ಟ ಪಂಗಡ), ರೈಲ್ವೆ ಬಡಾವಣೆ ಅಂಗನವಾಡಿ ಕೇಂದ್ರ (ಇತರೆ) ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಅರ್ಜಿಗಳನ್ನು ವೆಬ್ ಸೈಟ್‌ನಲ್ಲಿ ಫೆ.7ರ ಸಂಜೆ 5.30 ಗಂಟೆಯೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಗರದ ಪಿಡಬ್ಲ್ಯೂಡಿ ಕಾಲೋನಿಯಲ್ಲಿರುವ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net