

ಕಲಬುರಗಿ: ಯಡ್ರಾಮಿ ತಾಲೂಕಿನ ಆಲೂರ ಗ್ರಾಮದ ಅಂಗನವಾಡಿ ಕೇಂದ್ರ-೨ರ ಕಾರ್ಯಕರ್ತೆ ಸಂಪತ್ತಿಬಾಯಿ ಮೇಲೆ ಹಲ್ಲೆ ಮಾಡಿದ ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಪ್ಪ ನಾಟಿಕಾರನನ್ನು ಬಂಧಿಸಬೇಕು, ಸಹಾಯಕಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂರ್ಷ ಸಮಿತಿ ರಾಜ್ಯ ಸಂಚಾಲಕ ಅರ್ಜುನ ಭದ್ರೆ ಒತ್ತಾಯಿಸಿದರು.
ಆಲೂರದಲ್ಲಿನ ಎರಡನೇ ಅಂಗನವಾಡಿ ಕೇಂದ್ರಕ್ಕೆ ಮೊದಲನೇ ಕೇಂದ್ರದ ಕಾರ್ಯಕರ್ತೆ ಸಂಪತ್ತಿಬಾಯಿಯನ್ನು ಹೆಚ್ಚುವರಿಯಾಗಿ ಕೆಲಸ ಮಾಡುವಂತೆ ಇಲಾಖೆ ಸೂಚಿಸಿತ್ತು. ಅಲ್ಲಿನ ಸಹಾಯಕಿ ಶಾಂತಾಬಾಯಿಗೆ ವಿನಾ ಕಾರಣ ರಜೆ ಅವಧಿಯ ಸಹಿ ಮಾಡಿದ್ದರು. ಇದರ ಬಗ್ಗೆ ಸಂಪತ್ತಿಬಾಯಿ ಪ್ರಶ್ನಿಸಿದ್ದರು. ಇದನ್ನು ಎಸ್‌ಡಿಎಂಸಿ ಅಧ್ಯP್ಷÀ ಮಲ್ಲಪ್ಪ ನಾಟಿಕಾರಗೆ ತಿಳಿಸಿದ ಶಾಂತಾಬಾಯಿ ಹಲ್ಲೆ ಮಾಡಿಸಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಪೊಲೀಸರು ಬಂಧಿಸಿಲ್ಲ. ಕೂಡಲೇ ಆರೋಪಿಯನ್ನು ಬಂಧಿಸಬೇಕು. ಜೇವರ್ಗಿ ತಾಲೂಕಿನಲ್ಲಿ ಮೂರು ವರ್ಷದಿಂದ ದಲಿತ ಮೇಲಿನ ಹಲ್ಲೆ ಪ್ರಕರಣ ಹೆಚ್ಚುತ್ತಿದ್ದು, ಈ ಕುರಿತು ನ.೫ರಂದು ಗೃಹ ಸಚಿವರಿಗೆ ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.
ಹ¯್ಲÉಗೊಳಗಾದ ಅಂಗನವಾಡಿ ಕಾರ್ಯಕರ್ತೆ ಸಂಪತ್ತಿಬಾಯಿ ಮಾತನಾಡಿ, ದಲಿತ ಎಂಬ ಕಾರಣಕ್ಕೆ ಸವರ್ಣಿಯರ ಓಣಿಯ ಅಂಗನವಾಡಿ ಕೇಂದ್ರದಲ್ಲಿ ಕೆಲಸ ಮಾಡಲು ಬಿಡುತ್ತಿಲ್ಲ. ಸಹಾಯಕಿ ಕುರ್ಚಿ ಮೇಲೆ ಕುಳಿತು ನನಗೆ ಕೆಳಗೆ ಕುಳಿತುಕೊಳ್ಳಲು ಹೇಳಿ, ನನ್ನ ಕೆಲಸಕ್ಕೆ ಅಡ್ಡಿ ಪಡಿಸುತ್ತಿದ್ದಳು. ಆಕೆ ವಿರುದ್ಧ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ಮಲ್ಲಿಕಾರ್ಜುನ ಕ್ರಾಂತಿ, ಮಲ್ಲಿಕರ್ಜುನ ಖನ್ನಾ, ಸೂರ್ಯಕಾಂತ ಅಜಾದಪುರ, ಮಹೇಶ ಕೋಕಿಲೆ ಇದ್ದರು.