ಅಂಗನವಾಡಿ ಅಭಿವೃದ್ಧಿ ಕಾಮಗಾರಿ ಪರಿಶೀಲನೆ

24Kush001
ಸುಂದರನಗರದಲ್ಲಿ ಅಂಗನವಾಡಿ ಅಭಿವೃದ್ಧಿ ಕಾಮಗಾರಿಯನ್ನು ವಾರ್ಡ್ ಸದಸ್ಯ ಕೆ.ಬಿ.ಶಂಶುದ್ಧೀನ್ ಗುರುವಾರ ಪರಿಶೀಲಿಸಿದರು. ಬೋಜಮ್ಮ, ಹರೀಶ್ ಇತರರು ಇದ್ದರು.
Published on

ಕುಶಾಲನಗರ: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಎರಡನೇ ವಾರ್ಡ್‌ನ ಸುಂದರ ನಗರದಲ್ಲಿ 2 ಲಕ್ಷ ರೂ. ವೆಚ್ಚದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರದ ಅಭಿವೃದ್ಧಿ ಕಾಮಗಾರಿಯನ್ನು ವಾರ್ಡ್ ಸದಸ್ಯ ಕೆ.ಬಿ.ಶಂಶುದ್ಧೀನ್ ಗುರುವಾರ ಪರಿಶೀಲಿಸಿದರು.

ಅಂಗನವಾಡಿ ಕೇಂದ್ರವನ್ನು ಜಿಪಂ 1.4 ಲಕ್ಷ ರೂ. ಮತ್ತು ತಾಪಂನ 60 ಸಾವಿರ ರೂ. ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಅಂಗನವಾಡಿ ಕೇಂದ್ರದ ಸುತ್ತಲೂ ಕಾಂಕ್ರೀಟ್ ಹಾಕಲಾಗುತ್ತಿದ್ದು, ಹಿಂಭಾಗ ಕಾಂಪೌಂಡ್ ನಿರ್ಮಿಸಲಾಗುತ್ತಿದೆ. ಮಳೆಗಾಲದಲ್ಲಿ ಮಳೆ ನೀರು ಬಿದ್ದು ತೊಂದರೆಯಾಗುತ್ತಿದ್ದ ಕಾರಣ ಅಂಗನವಾಡಿ ಮುಂಭಾಗದಲ್ಲಿ ಕಬ್ಬಿಣದ ಛಾವಣಿ ಅಳವಡಿಸಲಾಗುತ್ತಿದೆ. ತಾಪಂ ಅನುದಾನದಲ್ಲಿ ಬಣ್ಣ ಬಳಿಯುವ ಕೆಲಸ ನಡೆಸಲಾಗುವುದು ಎಂದು ಕೆ.ಬಿ.ಶಂಶುದ್ಧೀನ್ ಹೇಳಿದರು.

ಅಂಗನವಾಡಿ ಶಿಕ್ಷಕಿ ಬೋಜಮ್ಮ, ಜಿಲ್ಲಾ ಜೆಡಿಎಸ್ ಯುವ ಘಟಕದ ಉಪಾಧ್ಯಕ್ಷ ಹರೀಶ್, ನಿರ್ಮಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net