ಅಂಗಡಿ-ಮುಂಗಟ್ಟು ಬಂದ್

5kdl1
Published on

ಕುಂದಗೋಳ: ಕರೊನಾ ಹತೋಟಿಗಾಗಿ ರಾಜ್ಯ ಸರ್ಕಾರ ಭಾನುವಾರ ಲಾಕ್​ಡೌನ್ ಘೊಷಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಎಲ್ಲ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದವು.

ತುರ್ತು ಸೇವೆಗಳನ್ನು ಹೊರತುಪಡಿಸಿ ಪ್ರತಿದಿನ ಇರುತ್ತಿದ್ದ ಜನದಟ್ಟಣೆ, ವ್ಯವಹಾರ, ಕೆಲಸಗಳು ಸಂಪೂರ್ಣ ಸ್ಥಗಿತವಾಗಿದ್ದವು. ಸಾರ್ವಜನಿಕರಿಲ್ಲದೆ ರಸ್ತೆಗಳು, ಬಸ್ ನಿಲ್ದಾಣ ಬಿಕೋ ಎನ್ನುತ್ತಿದ್ದವು. ಖಾಸಗಿ, ವಾಕರಸಾ ಸಂಸ್ಥೆಯ ವಾಹನಗಳ ಸಂಚಾರ ಬಂದಾಗಿತ್ತು.

ಮುಂಜಾಗ್ರತೆ ಕ್ರಮವಾಗಿ ಸಾರ್ವಜನಿಕರು ಮನೆಯಿಂದ ಹೊರಗೆ ಬರಬಾರದು ಎಂದು ಪೊಲೀಸರು ಶನಿವಾರ ಸಂಜೆ 5 ಗಂಟೆಗೆ ಎಚ್ಚರಿಕೆ ನೀಡಿದ್ದರು. ಇದರಿಂದಾಗಿ ಪಟ್ಟಣದಲ್ಲಿ ಭಾನುವಾರ ಬೆಳಗ್ಗೆಯಿಂದ ವಾಹನ, ಜನ ಸಂಚಾರವಿರಲಿಲ್ಲ. ಪೊಲೀಸರು ಸಮರ್ಪಕವಾಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net