ಅಂಗಡಿ ಬೀಗ ಮುರಿದು ಕಳ್ಳತನ

Crime Logo
Published on

ಹನೂರು: ತಾಲೂಕಿನ ಕೌದಳ್ಳಿ ಗ್ರಾಮದ ಜ್ಯೋತಿಪುರದಲ್ಲಿ ಭಾನುವಾರ ರಾತ್ರಿ ಕಳ್ಳರು ಅಂಗಡಿಯೊಂದರ ಬೀಗ ಮುರಿದು ನಗದು ಹಾಗೂ ವಸ್ತುಗಳನ್ನು ಕದ್ದಿದ್ದಾರೆ.

ಗ್ರಾಮದ ನೂರುಲ್ಲಾ ಎಂಬುವರು ಗ್ರಾಮದ ಮುಖ್ಯ ರಸ್ತೆ ಬದಿಯಲ್ಲಿ ಅಂಗಡಿಯನ್ನು ಇಟ್ಟುಕೊಂಡಿದ್ದು, ಭಾನುವಾರ ರಾತ್ರಿ ಎಂದಿನಂತೆ ವ್ಯಾಪಾರ ಮುಗಿಸಿ ಬೀಗ ಹಾಕಿಕೊಂಡು ಮನೆಗೆ ತೆರಳಿದ್ದರು. ಸೋಮವಾರ ಬೆಳಗ್ಗೆ ಅಂಗಡಿಗೆ ಬಂದಾಗ ಕಳ್ಳರು ಬೀಗ ಮುರಿದಿರುವುದು ಗಮನಕ್ಕೆ ಬಂದಿದೆ. ಒಳಹೋಗಿ ನೋಡಿದಾಗ 40 ಸಾವಿರ ರೂ. ನಗದು, ಸಿಗರೇಟ್ ಹಾಗೂ ಕೆಲ ವಸ್ತುಗಳು ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ನೂರುಲ್ಲಾ ಅವರು ರಾಮಾಪುರ ಪೊಲಿಸರಿಗೆ ದೂರು ನೀಡಿದರು. ಸ್ಥಳಕ್ಕಾಗಮಿಸಿದ ಪೊಲೀಸರು ಮಾಹಿತಿ ಪಡೆದು ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net