ಅಂಗಡಿ ಕೀಲಿ ಮುರಿದು ದುರ್ವರ್ತನೆ

Crime Logo
Published on

ಹುಬ್ಬಳ್ಳಿ: ಇಲ್ಲಿನ ಕಿತ್ತೂರು ಚನ್ನಮ್ಮ ವೃತ್ತದ ಯುರೇಕಾ ಟಾವರ್​ಗೆ 20ಕ್ಕೂ ಹೆಚ್ಚು ಜನ ನುಗ್ಗಿ ಅಂಗಡಿಯೊಂದರ ಕೀಲಿ ಮುರಿದು, ವಾಚ್​ವುನ್ ಮೇಲೆ ಹಲ್ಲೆ ನಡೆಸಿ ದುರ್ವರ್ತನೆ ತೋರಿದ ಘಟನೆ ಸೋಮವಾರ ನಡೆದಿದೆ.

ನಾಸಿರ್ ಜಮಖಾನವಾಲೆ, ರ್ಯಾಂಬೋ ರಫೀಕ ಹಾಗೂ ಇತರರು ದುರ್ವರ್ತನೆ ತೋರಿದ ಆರೋಪಿಗಳು. ಸುರೇಶ ಜೈನ್ ಎಂಬುವರು ಮಳಿಗೆ ಖರೀದಿಸಿದ್ದರು. ಮೊದಲ ಮಾಲೀಕ ಸೇಲ್ ಡೀಡ್ ಆದ ಬಳಿಕ, ಬೇರೊಬ್ಬರಿಗೆ ಲೀಸ್​ಗೆ ನೀಡಿದ್ದ ಎನ್ನಲಾಗಿದೆ.

ಜಮಖಾನವಾಲೆ ಎಂಬಾತ ಬೆಳಗ್ಗೆ 20ಕ್ಕೂ ಹೆಚ್ಚು ಜನರೊಂದಿಗೆ ಆಗಮಿಸಿ ಕೀಲಿ ಮುರಿದು, ಅಂಗಡಿ ಒಳಗಿದ್ದ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದ. ವಾಚ್​ವುನ್ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಉಪನಗರ ಠಾಣೆ ಪೊಲೀಸರು ಆರೋಪಿಗಳನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದರು. ಕೀಲಿ ಮುರಿದು, ಹಲ್ಲೆ ನಡೆಸಿದ ಕುರಿತು ಮಳಿಗೆ ಮಾಲೀಕ ಸುರೇಶ ಜೈನ್ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

2019ರಲ್ಲೇ ಖರೀದಿ

ಬೈಲಪ್ಪನವರ ನಗರದ ಸಂಜಯ ಹೊಂಬಳ ಹಾಗೂ ಕಿರಣ ಹೊಂಬಳ ಅವರಿಂದ ನಾನು 2019ರ ಮೇ 15ರಂದು ಅಂಗಡಿ ಖರೀದಿಸಿ, ಕಬ್ಜಾ ಪಡೆದಿದ್ದೆ. ಆ.16ರಂದು ಪೂಜೆ ಮಾಡಿ ಕೀಲಿ ಹಾಕಿಕೊಂಡು ಬಂದಿದ್ದೆ. ಸೋಮವಾರ ಜಮಖಾನವಾಲೆ ಹಾಗೂ ಇತರರು ಕೀಲಿ ಮುರಿದು ವಾಚ್​ವುನ್ ಮೇಲೆ ಹಲ್ಲೆ ನಡೆಸಿದ್ದಾರೆ. ದೂರು ನೀಡಿದ ನಂತರ ಪೊಲೀಸರ ಸಲಹೆಯಂತೆ ನಾನೇ ಅಂಗಡಿಗೆ ಬೀಗ ಹಾಕಿದ್ದೇನೆ ಎಂದು ಸುರೇಶ ಜೈನ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net