ಅಂಗ ರಚನಾಶಾಸ್ತ್ರ ಕೃತಿ ಬಿಡುಗಡೆ

Shaheen
Published on

ಬೀದರ್: ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್) ಪ್ರಾಧ್ಯಾಪಕ ಡಾ.ರೋಶನ್ ಜಮೀರ್ ಹೊರತಂದಿರುವ ಮಾನವ ಅಂಗ ರಚನಾಶಾಸ್ತ್ರ ಕುರಿತ ಎರಡು ಕೃತಿಗಳನ್ನು ಶಹಾಪುರ ಗೇಟ್ ಸಮೀಪದ ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ಬಿಡುಗಡೆ ಮಾಡಲಾಯಿತು.

ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಬಿಡುಗಡೆ ಮಾಡಿ ಮಾತನಾಡಿ, ಎಂಬಿಬಿಎಸ್ ವಿದ್ಯಾರ್ಥಿಗಳು ಹಾಗೂ ನೀಟ್ ಪಿಜಿ ಆಕಾಂಕ್ಷಿಗಳಿಗೆ ಡಾ.ರೋಶನ್ ಕೃತಿಗಳು ತುಂಬ ಉಪಯುಕ್ತವಾಗಿವೆ. ಸಂಸ್ಥೆಯಿಂದ ನೀಟ್ ಸಾಧಕರು ಇತರ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಗುವುದು ಎಂದು ತಿಳಿಸಿದರು.

ಲೇಖಕ ಡಾ.ರೋಶನ್ ಜಮೀರ್ ಮಾತನಾಡಿ, ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ನೆರವಾಗಲು ಕೃತಿಗಳನ್ನು ರಚಿಸಲಾಗಿದೆ. ಕೃತಿಗಳಲ್ಲಿ ಸಿಬಿಎಸ್ಇ ಪಠ್ಯಕ್ರಮ ಅನುಸರಿಸಲಾಗಿದೆ ಎಂದು ಹೇಳಿದರು.

ಪ್ರಾಧ್ಯಾಪಕ ಡಾ.ಜಾವೀದ್, ಡಾ.ಫಾಯೆಮಿ ಮಾತನಾಡಿದರು. ಡಾ.ಶಂಶುದ್ದೀನ್, ಡಾ.ಉಜಿಯರ್, ಡಾ.ಜ್ಞಾನೇಶ್ವರ ಪಾರಿಲ್, ಡಾ.ಅನ್ಸಾರ್ ಜಾವೀದ್, ಡಾ.ಸೋಹಿಲ್, ಡಾ.ಫಜಲ್, ಡಾ.ಮಜಿದ್ದಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net