ಅಂಕಿ ಸಂಖ್ಯೆಗಳ ಭಾಷಣದ ಸಭೆ

2606Klb04
Published on

ಕಲಬುರಗಿ: ಮಹಿಳಾ ದೌರ್ಜನ್ಯ, ಕಿರುಕುಳ, ಸ್ತಿçÃಯರ ಆರೋಗ್ಯ ಸಮಸ್ಯೆ, ಹೆಣ್ಣುಮಕ್ಕಳ ನಾಪತ್ತೆ, ಅಂಗನವಾಡಿ ಸಮಸ್ಯೆ… ಹೀಗೆ ಸಾಲು, ಸಾಲು ಸಮಸ್ಯೆಗಳ ಬಗ್ಗೆ ಚರ್ಚೆಯಾದರೂ ಅಂಕಿ, ಸಂಖ್ಯೆಗಳು, ದಾಖಲೆಗಳನ್ನು ಅಧಿಕಾರಿಗಳು ಮಹಿಳಾ ಆಯೋಗದ ಅಧ್ಯಕ್ಷರಿಗೆ ದಾಖಲೆ ತೋರಿಸಿದರೆ ವಿನಾಃ, ವಾಸ್ತವದಲ್ಲಿ ಸಮಸ್ಯೆ ಏನಿದೆ, ಕೊರತೆ ಹೇಗಿದೆ ಎಂಬ ಪ್ರಶ್ನೆಗಳಿಗೆ ಅಂಕಿ ಸಂಖ್ಯೆಯನ್ನು ನೀಡದೇ, ಗಂಭೀರ ವಿಷಯಗಳ ಚರ್ಚೆ ಬರೀ ಭಾಷಣಕ್ಕೆ ಸೀಮಿತವಾಯಿತು.
ಇದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಮಹಿಳಾ ಮೀಸಲು, ಸರ್ಕಾರಿ-ಖಾಸಗಿ ಸಂಸ್ಥೆಯಲ್ಲಿ ಆಂತರಿಕ ದೂರು ಸಮಿತಿ ರಚನೆ, ಮಹಿಳಾ ದೌರ್ಜನ್ಯ ಪ್ರಕರಣ ಮತ್ತು ಸುರP್ಷÀತೆ ಕುರಿತ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷಿö್ಮÃ ಚೌಧರಿ ಅಧ್ಯಕ್ಷತೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕಂಡ ದೃಶ್ಯ.
ಅಧಿಕಾರಿಗಳು ಅಕ್ಷರಶಃ ದಾಖಲೆ ತೋರಿಸಿದರೆ ವಿನಾಃ, ವಾಸ್ತವವನ್ನು ತೋರಲೇ ಇಲ್ಲ. ಒಂದೆರಡು ಕಡೆ ಭೇಟಿ ನೀಡಿದ್ದ ಘಟನೆ ಉಲ್ಲೇಖಿಸಿ, ಅಧ್ಯಕ್ಷೆ ಪ್ರಶ್ನಿಸಿದರೆ ವಿನಾಃ, ವಾಸ್ತವ ಸಮಸ್ಯೆ ಅನಾವರಣವಾಗದೆ ಅಧಿಕಾರಿಗಳ ಅಂಕಿಸAಖ್ಯೆಗಳೇ ರಾರಾಜಿಸಿದವು. ಅಧ್ಯಕ್ಷೆ ಚೌಧರಿ ಅವರ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳು ದೊರೆಯಲೇ ಇಲ್ಲ. ಈ ಮಧ್ಯೆ ಪ್ರವೇಶಿಸಿದ ಜಿಲ್ಲಾಧಿಕಾರಿ ಎಲ್ಲದಕ್ಕೂ ಸಮಜಾಯಿಸಿ, ನೀಡಿ ವಿವರಗಳನ್ನು ನೀಡಿದರು.
ಸಭೆ ಆರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ ಹಾಕೆ ಮಾತನಾಡಿ,, ಪ್ರತಿ ಠಾಣೆಯಲ್ಲಿ ದೂರು ಸ್ವೀಕಾರ, ಕಾನೂನು ನೆರವು ನೀಡಲಾಗುತ್ತಿದೆ. ಕಳೆದ ಆರು ತಿಂಗಳಲ್ಲಿ ೪೦ ಮಹಿಳೆಯರು, ೨೨ ಅಪ್ರಾಪ್ತೆಯರು ಸೇರಿ ೬೨ ಕಾಣೆ ಪ್ರಕರಣವಾಗಿದೆ. ೨೧ ಪತ್ತೆ ಮಾಡಲಾಗಿದೆ. ಒಂಬತ್ತು ಅತ್ಯಾಚಾರ ಕೇಸ್ ಆಗಿದ್ದು, ಏಳು ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ. ಬಾಲ್ಯ ವಿವಾಹ ತಡೆಗೆ ಅರಿವು ಮೂಡಿಸಲಾಗುತ್ತಿದೆ. ತೆರೆದ ಮನೆ ಕಾರ್ಯಕ್ರಮ ಮಾಡುತ್ತಿz್ದÉÃವೆ ಎಂದರು.
ಎಷ್ಟು ತೆರೆದ ಮನೆಗೆ ಬಾಗಿಲಿಗೆ ಹೋಗಿದ್ದೀರಿ? ಎಷ್ಟು ಅರಿವು ಕಾರ್ಯಕ್ರಮ ಮಾಡಿದ್ದೀರಿ ತಿಳಿಸಿ ಎಂದು ಡಾ.ನಾಗಲಕ್ಷಿö್ಮÃ ಚೌಧರಿ ಪ್ರಶ್ನಿಸಿದರೆ, ಆಮೇಲೆ ವರದಿ ನೀಡುತ್ತೇನೆ, ತಿಳಿಸುತ್ತೇನೆ ಎಂದು ಎಸ್‌ಪಿ ಪ್ರತಿಕ್ರಿಯಿಸಿದರು. ಪೊಲೀಸ್ ಸಿಬ್ಬಂದಿಗೆ ಲಿಂಗಸAವೇದನೆ ಅರಿವು ಮೂಡಿಸಿದ್ದೀರಾ? ಎಂಬ ಪ್ರಶ್ನೆಗೂ ಎಸ್‌ಪಿ ಉತ್ತರಿಸಿ, ಮಹಿಳಾ ಡೆಸ್ಕ್ ಮಾಡಿz್ದÉÃವೆ. ಶಾಲಾ ಮಕ್ಕಳಿಗೆ ಅರಿವು ಮೂಡಿಸಿz್ದÉÃವೆ ಎಂದರು. ಎಷ್ಟು ಮಾಡಿದ್ದೀರಿ? ಕಾರ್ಯಕ್ರಮ ಬಗ್ಗೆ ತಿಳಿಸಿ ಎಂಬ ಪ್ರಶ್ನೆಗೆ ಎಸ್‌ಪಿ ತಿಳಿಸುತ್ತೇನೆ ಎಂದರು.
ಡಿ.ಸಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಜಿ¯್ಲÉಯಲ್ಲಿ ಬಾಲಕೀಯರಿಗೆ ಮಿಷನ್ ಸುರಕ್ಷಾ ಯೋಜನೆಯಡಿ ೪೫೦ ಜನರನ್ನು ಮಾಸ್ಟರ್ ಟ್ರೇನರ್‌ಗಳನ್ನು ನೇಮಿಸಿ, ೨,೧೯೮ ಶಾಲೆ, ಕಾಲೇಜು, ವಸತಿ ನಿಲಯಕ್ಕೆ ಹೋಗಿ ೪ ಲಕ್ಷ ಮಕ್ಕಳಿಗೆ ಅರಿವು ಮೂಡಿಸಲಾಗಿದೆ ಎಂದಾಗ ಡಾ.ನಾಗಲಕ್ಷಿö್ಮÃ ಚೌಧರಿ ಶ್ಲಾಘಿಸಿದರು.
ಡಿಸಿಪಿ ಕನಿಕಾ ಸಿಕ್ರಿವಾಲ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಹೆಚ್ಚುವರಿ ಎಸ್‌ಪಿ ಶ್ರೀನಿಧಿ, ಎಸಿಪಿ ಬಿಂದುಮಣಿ, ಆರ್‌ಎನ್, ಡಿಸಿಪಿಓ ಮಂಗಲಾ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net