

ಕಟಕೋಳ: ಗ್ರಾಮದೇವತೆಯರ ಜಾತ್ರೆ ಎರಡನೇ ದಿನವಾದ ಬುಧವಾರ ದ್ಯಾಮವ್ವ&ದುರ್ಗವ್ವ ದೇವಸ್ಥಾನದಿಂದ ದೇವಿಯರು ಅಂಕಿ ಚೌಡಕಿ ಕಟ್ಟೆಯಲ್ಲಿ ಭಕ್ತರ ದರ್ಶನಕ್ಕೆ ಆಸೀನರಾದರು. ಇದಕ್ಕೂ ಮೊದಲು ದೇವಿಯರನ್ನು ತವರು ಮನಿಗೆ ಕರೆ ತಂದು ಸೀರೆ ಉಡಿಸಿಕೊಂಡು ಭರಮಪ್ಪನ ದೇವಸ್ಥಾನ ಮತ್ತು ರೇವಣಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇಶಪಾಂಡೆ ಅವರ ಮನೆಗೆ ನೀಡಿ ನಿಂಗನಗೌಡರ ಮತ್ತು ಕಂಬಾರ ಓಣಿಯ ಭಕ್ತರ ಮನೆಗೆ ಹೋಗಿ ಬಳಿಗಾರ ಮನೆಗೆ ಬಂದು ಬಳಿ ಧರಿಸಿಕೊಂಡು ಗೌಡರ ಮತ್ತು ದೇಸಾಯಿ ಅವರ ವಾಡೆಗೆ ಹೋಗಿ ದರ್ಶನ ನೀಡಿ ಅಂಕಿ ಚೌಡಿಯ ಮುಂದಿನ ಕಟ್ಟಯಲ್ಲಿ ಆಸೀನರಾದರು. ಈ ವೇಳೆ ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಭಕ್ತು ಭಂಡಾರ ಎರಚಿ ಸಂಭ್ರಮಿಸಿದರು.