ಅಂಕಗಳಿಕೆಗೆ ವಿದ್ಯಾರ್ಥಿಗಳು ಸೀಮತರಾಗದಿರಲಿ

23M.D.R.3
ಮದ್ದೂರು ಪಟ್ಟಣದ ಎಂ.ಎಚ್.ಚೆನ್ನೇಗೌಡ ವಿದ್ಯಾನಿಲಯ, ಎಚ್.ಕೆ ವೀರಣ್ಣಗೌಡ ಪದವಿ ಮತ್ತು ಪದವಿ ಪೂರ್ವ ಕಾಲೇಜು, ಗ್ರಂಥಾಲಯ ವಿಭಾಗದ ಸಹಾಯದೊಂದಿಗೆ, ಪ್ರಾತಸ್ಮರಣೀಯ ಕೆ.ಟಿ. ಸೋಮಶೇಖರ್ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಪುಸ್ತಕ ವಿಮರ್ಶೆ ಸ್ಪರ್ಧಾ ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿ ಸಿ.ಅಪೂರ್ವಚಂದ್ರ ಉದ್ಘಾಟಿಸಿದರು. ಪ್ರೊ.ಬಿ.ಎಸ್.ಬೋರೇಗೌಡ, ಜಿ.ಎಸ್.ಶಿವರಾಮು, ಕೆ.ಟಿ.ಚಂದು, ಶಿವಪ್ರಕಾಶ್, ಎಂ.ಎನ್.ದಿವ್ಯ ಇದ್ದರು.
Published on

ಮದ್ದೂರು: ಪಟ್ಟಣದ ಎಂ.ಎಚ್.ಚೆನ್ನೇಗೌಡ ಸಂಸ್ಥೆ, ಎಚ್.ಕೆ ವೀರಣ್ಣಗೌಡ ಪದವಿ ಮತ್ತು ಪದವಿ ಪೂರ್ವ ಕಾಲೇಜು, ಗ್ರಂಥಾಲಯ ವಿಭಾಗದ ಸಹಾಯದೊಂದಿಗೆ, ಕೆ.ಟಿ.ಸೋಮಶೇಖರ್ ಅವರ ಸ್ಮರಣಾರ್ಥ ಪುಸ್ತಕ ವಿಮರ್ಶೆ ಕಾರ್ಯಕ್ರಮ ಕಾಲೇಜಿನ ಎ.ವಿ. ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿತ್ತು.

ಎಂ.ಎಚ್.ಚೆನ್ನೇಗೌಡ ಸಂಸ್ಥೆಯ ಕಾರ್ಯದರ್ಶಿ ಸಿ.ಅಪೂರ್ವ ಚಂದ್ರ ಮಾತನಾಡಿ, ವಿದ್ಯಾರ್ಥಿಗಳ ಜೀವನ ಕೇವಲ ಪರೀಕ್ಷೆಯಲ್ಲಿ ಅಂಕಗಳಿಸುವುದಕಷ್ಟೇ ಸೀಮಿತವಾಗಬಾರದು. ಪುಸ್ತಕಗಳನ್ನು ವಿಮರ್ಶಾತ್ಮಕವಾಗಿ ಅಧ್ಯಯನ ಮಾಡಿ, ಅದರಲ್ಲಿರುವ ಸತ್ಯಾಸತ್ಯತೆಗಳನ್ನು ಪರಾಮರ್ಶಿಸುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದರು.

ಭಾರತಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಎಸ್.ಬೋರೇಗೌಡ ಮಾತನಾಡಿ, ಈ ರೀತಿಯ ಕಾರ್ಯಕ್ರಮ ಆಯೋಜಿಸಿರುವುದು ಇದೇ ಮೊದಲು. ಹಾಗಾಗಿ ಇದು ಮುಂದಿನ ದಿನಗಳಲ್ಲಿ ಎಲ್ಲರಿಗೂ ಮಾದರಿಯಾಗಲಿ ಎಂದು ಆಶಿಸಿದರು. ಕಾರ್ಯಕ್ರಮವನ್ನು ಎಂ.ಎಚ್.ಚನ್ನೇಗೌಡ ವಿದ್ಯಾನಿಲಯದ ಖಜಾಂಚಿ ಜಿ.ಎಸ್.ಶಿವರಾಮು ಉದ್ಘಾಟಿಸಿದರು.

ವಿಮರ್ಶೆ ಮಂಡಿಸಿದ ವಿದ್ಯಾರ್ಥಿಗಳು :

ಕಾರ್ಯಕ್ರಮದಲ್ಲಿ ತಾಲೂಕಿನ ಹಲವಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಜಿ.ಐಶ್ವರ್ಯಾ, ಸೋಲಿಲ್ಲದ ಸರದಾರರು ಪುಸ್ತಕ ಕುರಿತು ಸ್ವಾತಂತ್ರ್ಯ ಸಂದರ್ಭದಲ್ಲಿ ಹೋರಾಟಗಾರರು ಅನುಭವಿಸಿದ ಯಾತನೆ, ನೋವಿನ ವಿಚಾರಗಳನ್ನು ಕುರಿತು, ಜೀವಿತ ಎಂಬ ವಿದ್ಯಾರ್ಥಿನಿ, ಅನಾಥಾಶ್ರಮಕ್ಕೆ ಹೋಗಿ ತಾಯಿಯನ್ನು ನೋಡುವ ಹೃದಯ ವಿದ್ರಾವಕ ಘಟನೆಯನ್ನು, ಭವ್ಯಾ ಬದುಕು ನೆನಪುಗಳ ಪುಸ್ತಕದ ಮೂಲಕ ಎಚ್.ಕೆ.ವೀರಣ್ಣಗೌಡ ಅವರ ಜೀವನ ಸಾಧನೆ, ನಡೆದು ಬಂದ ಹಾದಿಯನ್ನು ಮನಮುಟ್ಟುವಂತೆ ವ್ಯಕ್ತಪಡಿಸಿದರು.

ಕುಮಾರಿ ಸಿಂಚನಾ ಚಿಕ್ಕವೀರರಾಜೇಂದ್ರ ಅವರ ಬಗ್ಗೆ, ಅಂತರ್ಜಲ ಬತ್ತುವಿಕೆಯಿಂದ ಆಗುತ್ತಿರುವ ಜಲ ಸಮಸ್ಯೆ ಕುರಿತು, ಪರಿಸರ ಅಸಮಾತೋಲನದ ಕುರಿತು ಕುಮಾರಿ ರಾಜೇಶ್ವರಿ, ಹೀಗೆ ಹತ್ತಾರು ಪುಸ್ತಕಗಳ ಕುರಿತು ಹಲವಾರು ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ತಮ್ಮ ವಿಮರ್ಶೆಯ ನುಡಿಗಳನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಶಂಕರೇಗೌಡ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲ ಎಸ್.ಬಿ.ಶಂಕರೇಗೌಡ, ಎಂ.ಎಚ್.ಚೆನ್ನೇಗೌಡ ವಿದ್ಯಾ ಸಂಸ್ಥೆಯ ಗೌರವ ಅಧ್ಯಕ್ಷ ಕೆ.ಟಿ.ಚಂದು, ಕೆ.ವಿ.ಶಂಕರೇಗೌಡ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಕೆ.ಚನ್ನಕೃಷ್ಣಯ್ಯ, ವರುಣನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎನ್.ಎಂ.ಶಿವಪ್ರಕಾಶ್, ಎಚ್.ಕೆ.ವಿ. ಪದವಿ ಕಾಲೇಜಿನ ಉಪ ಪ್ರಾಂಶುಪಾಲ ಪ್ರಕಾಶ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶಿವಕುಮಾರ್, ಸುರೇಂದ್ರ, ನಂದಿನಿ, ಗ್ರಂಥಪಾಲಕ ಆರ್.ಪಿ.ಚಂದನ್ ಹಾಗೂ ಸಂಸ್ಥೆಯ ನಿರ್ದೇಶಕರಾದ ಮಲ್ಲಿಕಾರ್ಜುನ್, ಎಂ.ಮುತ್ತುರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net