ಅಂಕ ಗಳಿಸುವುದಷ್ಟೇ ಶಿಕ್ಷಣವಲ್ಲ

24Rayabag1
Published on

ರಾಯಬಾಗ: ಜೀವನ ಅಮೂಲ್ಯವಾದದು, ಮರಳಿ ಬರುವುದಿಲ್ಲ. ಹೀಗಾಗಿ, ಜೀವನದ ಪ್ರತಿ ಕ್ಷಣವನ್ನೂ ಸಂತೋಷದಿಂದ ಕಳೆಯಬೇಕು ಎಂದು ತಾಳಿಕೋಟೆಯ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ಹೇಳಿದರು.

ಪಟ್ಟಣದ ಬಿ.ಎ.ಚೌಗುಲೆ ಶಿಕ್ಷಣ ಸಂಸ್ಥೆಯ ಕಾಲೇಜಿನ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸತೀಶ ಚೌಗುಲೆ ಸ್ವತಂತ್ರ ಪಪೂ ಕಾಲೇಜು ಹಾಗೂ ದಿಗ್ಗೆವಾಡಿಯ ಜಿ.ಬಿ.ಚೌಗುಲೆ ಪಪೂ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಪರೀಕ್ಷೆಯಲ್ಲಿ ಅಂಕ ಗಳಿಸುವುದು ಮಾತ್ರ ಶಿಕ್ಷಣವಲ್ಲ. ಸಮಾಜದಲ್ಲಿ ಗೌರವಯುತ ಬದುಕು ಕಟ್ಟಿಕೊಳ್ಳುವ ಜತೆಗೆ ಎಲ್ಲರಿಗೂ ಗೌರವ ನೀಡುವುದನ್ನು ಕಲಿಯುವುದು ನಿಜ ಶಿಕ್ಷಣ ಎಂದರು.

ಅರುಣ ಚೌಗುಲೆ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಎಲ್.ಬಿ.ಚೌಗುಲೆ ಅಧ್ಯಕ್ಷತೆ ವಹಿಸಿದ್ದರು. ಕಳೆದ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಸಂಸ್ಥೆ ಕಾರ್ಯದರ್ಶಿ ವಿನಯ ಚೌಗುಲೆ, ಪ್ರಾಚಾರ್ಯರಾದ ಎಸ್.ಎ.ನಾಂದಣಿ, ಎಸ್.ಎಸ್.ದಿಗ್ಗೆವಾಡಿ, ಉಪನ್ಯಾಸಕರಾದ ಎಂ.ಐ.ಬಡಿಗೇರ, ಎಸ್.ಎಸ್.ಕಾಡಾಪುರೆ, ವಿ.ಎಸ್.ಭೆಂಡೆ, ಎಸ್.ಎಸ್.ಐಹೊಳೆ, ಎಂ.ಎನ್.ಮುಲ್ಲಾ, ಅವಿನಾಶ ಹೊನ್ನಳ್ಳಿ, ಉದಯ ಕೋಟಿವಾಲೆ, ಇಸ್ಮಾಯಿಲ್ ನಂದಗಡಕರ, ರಮೇಶ ಶಿವಕ್ಕನವರ, ಸುರೇಖಾ ಹೆಗಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net