ಅಂಕ ಗಳಿಕೆಯೊಂದೇ ಶಿಕ್ಷಣದ ಮಾನದಂಡವಲ್ಲ: ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ

RPT WEB
Published on

ರಿಪ್ಪನ್‌ಪೇಟೆ: ಜೀವನದ ಅಭ್ಯುದಯಕ್ಕೆ ಬೇಕಾದ ಸದಾಚಾರಗಳನ್ನು ಕಲಿಸುವುದೇ ಶಿಕ್ಷಣ, ಶೈಕ್ಷಣಿಕ ಸಾಧನೆಗೆ ಅಂಕ ಗಳಿಕೆಯೊಂದೇ ಮಾನದಂಡವಲ್ಲ ಎಂದು ಆನಂದಪುರಂ ಮುರುಘಾಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀ ಬಸವೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ರಿಪ್ಪನ್‌ಪೇಟೆ ವಲಯ ಮಟ್ಟದ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮಕ್ಕಳಿಗೆ ಸೃಜನಶೀಲ ಗುಣಾತ್ಮಕ ಶಿಕ್ಷಣದ ಅಗತ್ಯವಿದೆ. ಅಂತಹ ಶಿಕ್ಷಣ ಇಂದಿನ ಗುರುಕುಲ ಮತ್ತು ಸರ್ಕಾರಿ ಶಾಲೆಗಳಲ್ಲಿ ದೊರೆಯುತ್ತದೆ. ಇಲ್ಲಿ ಸೇವಾ ಭಾವನೆಯಿಂದ ಶಿಕ್ಷಣವನ್ನು ನೀಡುತ್ತಾರೆ. ದೊಡ್ಡಕಟ್ಟಡಗಳಲ್ಲಿ ಉತ್ತಮ ಶಿಕ್ಷಣ ದೊರೆಯುತ್ತದೆ ಎಂಬ ಕಲ್ಪನೆಯಲ್ಲಿ ಜನರಿದ್ದು, ಪೋಷಕರು ಇಂತಹ ಮನಸ್ಥಿತಿಯಿಂದ ಹೊರಬರಬೇಕಿದೆ. ಮಕ್ಕಳಲ್ಲಿ ವಿವಿಧ ರೀತಿಯ ನೈಪುಣ್ಯತೆಗಳು ಅಡಕವಾಗಿರುತ್ತದೆ. ಅವುಗಳನ್ನು ಗುರುತಿಸಿ ಹೊರತೆಗೆಯುವ ಕಾರ್ಯ ಪೋಷಕರು ಮತ್ತು ಶಿಕ್ಷಕರಿಂದಾಗಬೇಕು. ಮಕ್ಕಳ ಕಾರ್ಯಕ್ಷತೆಗಳನ್ನು ಅರಿಯುವಂತಾಗಲು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಪೂರಕವಾಗಿದೆ. ಮಕ್ಕಳಿಗೆ ಕ್ರೀಡೆ, ಸಾಂಸ್ಕೃತಿಕ, ವೈಜ್ಞಾನಿಕ, ಸಾಹಿತ್ಯ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಪ್ರೇರೇಪಿಸುವ ಜತೆಗೆ ನೈತಿಕ ಬದುಕಿನ ನೈಜಶಿಕ್ಷಣ ನೀಡುವ ಅವಶ್ಯಕತೆ ಇದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net