

ಬಾಗಲಕೋಟೆ: ಮಂಜಿರಾಮ ಗ್ರುಪ್‌ದಿಂದ ನಗರದಲ್ಲಿ ದಸರಾ ಉತ್ಸವ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಂಚಾಲಕ ದರ್ಶನ ಏಡಕೆ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ದಸರಾ ಉತ್ಸವ, ದಾಂಡಿಯಾ ರಾಸ್, ಸಾಂಸ್ಕೃತಿಕ ಕಾರ್ಯಕ್ರಮಗಳು ಅ.೩ ರಿಂದ ೧೨ ರವರೆಗೆ ನಡೆಯಲಿವೆ ಎಂದರು.
ನವನಗರದ ಕಾಳಿದಾಸ್ ಮೈದಾನದಲ್ಲಿ ಪ್ರತಿ ದಿನ ಸಂಜೆ ೬.೩೦ ರಿಂದ ೧೦ ಗಂಟೆ ವರೆಗೆ ಜರುಗಲಿದ್ದು, ಕಾರ್ಯಕ್ರಮದಲ್ಲಿ ಸಾವಿರಾರು ಜನರು ಪಾಲ್ಗೊಳ್ಳುವವರು. ಸತತವಾಗಿ ೭ನೇ ಬಾರಿಗೆ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ೨೦೧೮ರಿಂದ ಆರಂಭ ಕಾರ್ಯಕ್ರಮವು ಯಶಸ್ವಿಯಾಗಿ ಜರುಗುತ್ತಾ ವರ್ಷ ವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಿದ್ದಾರೆ. ವಿಶೇಷವಾಗಿ ದಾಂಡಿಯಾ ರಾಸ್‌ನಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಜನರು ಪಾಲ್ಗೊಳ್ಳುವರು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಡಾ.ಎಂ ಎಸ್.ದಡ್ಡೇನವರ್, ಬಸವರಾಜ ಯಂಕಂಚಿ, ಜಿ.ಎಸ್.ಪಾಟೀಲ, ಬಸವರಾಜ ಅಪ್ಪಣ್ಣಗೋಳ, ರಾಜು ರೇವಣಕರ್ ಇದ್ದರು.