

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟಿçÃಯ ಹೆದ್ದಾರಿಗಳ ಹೊಸ ಕಾಮಗಾರಿ ನಿರ್ವಹಿಸಲು ಹಲವು ಮಂದಿ ಟೆಂಡರ್ ಸಲ್ಲಿಕೆ ಮಾಡಿದ್ದು, ಅ. ೧೯ರಂದು ಟೆಂಡರ್ ತೆರೆಯಲಾಗುತ್ತದೆ. ಬಳಿಕ ಟೆಂಡರ್ ಯಾರು ಪಡೆಯುತ್ತಾರೆಯೋ ಅವರು ನಿಯಮಾನುಸಾರವಾಗಿ ಕಾಮಗಾರಿ ಆರಂಭಿಸಲಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟಿçÃಯ ಹೆದ್ದಾರಿ ಕಾಮಗಾರಿಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಇದೀಗ ನಿರ್ಮಾಣವಾಗುತ್ತಿರುವ ರಾಷ್ಟಿçÃಯ ಹೆದ್ದಾರಿಗಳ ಇಕ್ಕೆಲಗಳಲ್ಲಿರುವ ಯಾವ ಯಾವ ಮರಗಳನ್ನು ತೆರವುಗೊಳಿಸಬೇಕು ಎಂಬ ಬಗ್ಗೆ ಈಗಾಗಲೇ ಅರಣ್ಯ ಇಲಾಖೆಯೊಂದಿಗೆ ಸೇರಿ ಮರಗಳನ್ನು ಗುರುತು ಮಾಡಲಾಗಿದೆ. ಹೀಗಾಗಿ ರಾಷ್ಟಿçÃಯ ಹೆದ್ದಾರಿ ಕಾಮಗಾರಿಗಳು ಯಾವುದೇ ಟೆಂಡರ್‌ದಾರರಿಗೆ ಸಿಕ್ಕರೂ ಅವರು ಅ. ೧೯ರ ಬಳಿಕ ಅರಣ್ಯ ಇಲಾಖೆಯೊಂದಿಗೆ ಸೇರಿ ನಿಯಮಾನುಸಾರವಾಗಿ ಮರ ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ. ಜೊತೆಗೆ ಯಾವುದೇ ಗೊಂದಲಗಳಿಗೂ ಆಸ್ಪದ ನೀಡಬಾರದು ಎಂದು ಹೇಳಿದರು.
ಮೂಗ್ತಿಹಳ್ಳಿಯಿಂದ ಮೂಡಿಗೆರೆವರೆಗೆ ಹಾಗೂ ಕಡೂರಿನಿಂದ ಮೂಡಿಗೆರೆವರೆಗಿನ ರಾಷ್ಟಿçÃಯ ಹೆದ್ದಾರಿ ಕುರಿತು ಪ್ರಮುಖವಾಗಿ ಚರ್ಚೆ ನಡೆಸಲಾಗಿದೆ. ಅದರಲ್ಲಿಯೂ ಮೂಗ್ತಿಹಳ್ಳಿಯಿಂದ ಮೂಡಿಗೆರೆವರೆಗಿನ ರಾಷ್ಟಿçÃಯ ಹೆದ್ದಾರಿ ಅಗಲೀಕರಣದ ಭೂ ಸ್ವಾಧೀನಕ್ಕೆ ಸಂಬAಧಿಸಿದAತೆ ವಿಶೇಷವಾಗಿ ಚರ್ಚೆ ನಡೆಸಲಾಗಿದೆ ಎಂದು ವಿವರಿಸಿದರು.
ಮೂಗ್ತಿಹಳ್ಳಿಯಿಂದ ಮೂಡಿಗೆರೆವರೆಗೆ ರಾಷ್ಟಿçÃಯ ಹೆದ್ದಾರಿ ಅಗಲೀಕರಣಕ್ಕಾಗಿ ೧೫೦ ಜನರ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಈ ಸಂಬAಧ ಎಲ್ಲರಿಗೂ ದಾಖಲೆ ನೀಡುವಂತೆ ನೋಟೀಸ್ ನೀಡಲಾಗಿತ್ತು. ಆದರೆ ಇದುವರೆಗೆ ಕೆಲವರು ದಾಖಲೆ ನೀಡಿದ್ದರೆ, ಇನ್ನು ಕೆಲವರು ದಾಖಲೆ ನೀಡಿಲ್ಲ. ಹೀಗಾಗಿ ಎಲ್ಲರೂ ದಾಖಲೆ ನೀಡಿದ ಬಳಿಕ ಶೀಘ್ರವೇ ಪರಿಹಾರ ವಿತರಣೆ ಮಾಡಿ ಕಾಮಗಾರಿ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
ಮೂಗ್ತಿಹಳ್ಳಿಯಿಂದ ಮೂಡಿಗೆರೆವರೆಗೆ ಅಗಲವಾಗಲಿರುವ ರಾಷ್ಟಿçÃಯ ಹೆದ್ದಾರಿ ಮೂಡಿಗೆರೆ ಪಟ್ಟಣದ ಒಳಗೆ ಕಿರಿದಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಅಧಿಕಾರಿಗಳಿಗೆ ಹೊಸದಾಗಿ ಸರ್ವೇ ನಡೆಸಲು ಸೂಚಿಸಿz್ದೆÃವೆ. ಒಂದು ವೇಳೆ ಪಟ್ಟಣದ ಒಳಗೆ ಹೆದ್ದಾರಿ ಕಿರಿದಾಗಿz್ದÉà ಆಗಿದ್ದಲ್ಲಿ ಅದನ್ನು ಸರಿಪಡಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ, ಎಸಿ ಸುದರ್ಶನ್, ತಹಸೀಲ್ದಾರ್ ರೇಷ್ಮಾ ಶೆಟ್ಟಿ, ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಎಇಇ ಕಾಂಬ್ಳೆ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಜಾತ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಪೂರ್ಣಿಮಾ, ಬಿಜೆಪಿ ಮುಖಂಡರಾದ ಎಚ್.ಸಿ.ಕಲ್ಮರುಡಪ್ಪ, ದೀಪಕ್ ದೊಡ್ಡಯ್ಯ ಮತ್ತಿತರರಿದ್ದರು.