ಅ.4 ರಿಂದ ಹಾವೇರಿಯಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ಸಮಾವೇಶ

ctd logo-----1.
Published on

ಚಿತ್ರದುರ್ಗ: ಹಾಸ್ಟೆಲ್ ವಿದ್ಯಾರ್ಥಿಗಳ ಆಹಾರ ಭತ್ಯೆ ಹೆಚ್ಚಳ, ಖಾಲಿ ಇರುವ ಹುದ್ದೆಗಳ ಭರ್ತಿ ಸೇರಿ ವಿವಿಧ ಬೇಡಿಕೆಗಳ ಈಡೇಕೆಗೆ ಆಗ್ರಹಿಸಿ ಹಾವೇರಿಯಲ್ಲಿ ಅಕ್ಟೋಬರ್ 4 ರಿಂದ ಎರಡು ದಿನಗಳ ಕಾಲ ಹಾಸ್ಟೆಲ್ ವಿದ್ಯಾರ್ಥಿಗಳ ರಾಜ್ಯಮಟ್ಟದ ಸಮಾವೇಶ ನಡೆಯಲಿದೆ ಎಂದು ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ಎಸ್. ಬಸವರಾಜ್ ಹೇಳಿದರು.

ನಗರದ ವಿವಿಧ ಹಾಸ್ಟೆಲ್‌ಗಳಲ್ಲಿ ಸಮಾಶೇಶದ ಲೋಗೂ ಬಿಡುಗಡೆ ಮಾಡಿ ಮಾತನಾಡಿ, ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಸೇರಿ ರಾಜ್ಯದಲ್ಲಿ 7.50 ಲಕ್ಷ ವಿದ್ಯಾರ್ಥಿಗಳು, ಆರು ಸಾವಿರಕ್ಕೂ ಹೆಚ್ಚು ಹಾಸ್ಟೆಲ್‌ಗಳಿವೆ. ಇವುಗಳಿಗೆ ಮೂಲ ಸೌಕರ್ಯ ಕಲ್ಪಿಸಲಾಗುತ್ತಿಲ್ಲ. ನೇಮಕಾತಿ ವಿಳಂಬದಿಂದ ನಿಲಯ ಪಾಲಕರ, ಸ್ವಚ್ಛತಾ ಸಿಬ್ಬಂದಿ ಕೊರತೆ ಹೆಚ್ಚಿದೆ ಎಂದರು.

ಎಸ್‌ಎಫ್‌ಐ ಮುಖಂಡರಾದ ಎಲ್.ಜಿ. ಸಂಜುನಾಯ್ಕ, ಎಸ್.ಎ. ರಕ್ಷಿತಾ ಮಾತನಾಡಿದರು. ದೀಪಾ, ಪ್ರೀತಿ, ಎನ್.ಸಿ. ಅಮೃತಾ, ಜೆ. ದೀಪಿಕಾ, ಜಿ.ಎಸ್. ಸಂಧ್ಯಾ, ಟಿ. ರಾಧಿಕಾ, ಎಸ್. ದಿವ್ಯಾ, ನೌಕೇಶ್, ಆಕಾಶ್ ಕಣವೇಶ್ವರ, ಎಸ್. ತಿಪ್ಪೇಸ್ವಾಮಿ, ರಾಜಶೇಖರ ಹಿರೇಮಠ, ಕೆ.ವಿ. ಸುದರ್ಶನ, ಬಿ.ರಾಜು, ಬಿ.ಎಸ್. ಕಾರ್ತಿಕ್, ಕುಶಾಲ್, ಮಹಾಲಕ್ಷ್ಮೀ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net