

ಹುಬ್ಬಳ್ಳಿ: ಇಲ್ಲಿಯ ಗಂಗೂಬಾಯಿ ಹಾನಗಲ್ ಸಂಗೀತ ವಿದ್ಯಾಲಯ ಹಾಗೂ ಕುಮಟಾ ತಾಲೂಕಿನ ಕತಗಾಲದ ಕಲಾಶ್ರೀ ಸಾಂಸತಿಕ ವೇದಿಕೆಗಳ ಆಶ್ರಯದಲ್ಲಿ "ರಾಗ ಸಂಗೀತ' ರಾಷ್ಟ್ರೀಯ ಸಂಗೀತ ಕಾರ್ಯಾಗಾರ ಅಕ್ಟೋಬರ್ 2ರಂದು ವಿದ್ಯಾನಗರದ ಬಿವಿಬಿ ಕಾಲೇಜಿನ ಆಕಿರ್ಟೆಕ್ಟ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಸಂಗೀತ ಶಿಕ್ಷಕಿ ವೈಷ್ಣವಿ ಹಾನಗಲ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಗೀತ ಆಸಕ್ತರಿಗೆ ಪ್ರೋತ್ಸಾಹ ನೀಡಲು ಹಾಗೂ ವಿಶೇಷ ತರಬೇತಿ ನೀಡುವ ಉದ್ದೇಶದಿಂದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ಸಂಸತ, ಸಂಗೀತ, ಕಲೆಗಳ ಪ್ರಸಾರಕ್ಕೆ ತಮ್ಮ ಜೀವನ ಮುಡಿಪಿಟ್ಟ ಕತಗಾಲದ ವಿದ್ವಾನ್ ಡಾ. ಕೆ. ಗಣಪತಿ ಭಟ್ ಅವರು ಕಾರ್ಯಾಗಾರ ನಡೆಸಿಕೊಡುವರು. ಪ್ರಾಚಿನ ಹಾಗೂ ಆಧುನಿಕ ಸಂಸತ ವಾಙ್ಮಯದಲ್ಲಿ ರಾಗ ಸಂಗೀತ ಉಲ್ಲೇಖ ಹಾಗೂ ಪ್ರಯೋಗದ ಬಗ್ಗೆ ಇವರು ತಿಳಿಸಿಕೊಡುವರು ಎಂದರು.
ಸಂಗೀತ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವಂತೆ ಕಾರ್ಯಾಗಾರದಲ್ಲಿ ಅಗತ್ಯ ಮಾಹಿತಿ ನೀಡಲಾಗುವುದು. ಸಂಗೀತ ಶಿಕ್ಷಕರು, ಕಲಾವಿದರು, ವಿಮರ್ಶಕರು ಹಾಗೂ ಪ್ರೌಢಶಾಲೆ ವಿದ್ಯಾಥಿರ್ಗಳು ಭಾಗವಹಿಸಲಿದ್ದಾರೆ ಎಂದರು.
ಹಿರಿಯ ಸಂಗೀತ ಸಾಧಕರಾದ ಪಂ. ಕೃಷ್ಣಾರಾವ್ ಇನಾಮದಾರ, ಪಂ. ಶ್ರೀನಿವಾಸ ಜೋಶಿ, ಡಾ. ಮಹೇಶ ಹಂಪಿಹೊಳಿ ಹಾಗೂ ಇತರರು ನಿರೀಕ್ಷಕರಾಗಿ ಪಾಲ್ಗೊಂಡು ಅಭಿಪ್ರಾಯ ಮಂಡಿಸಲಿದ್ದಾರೆ.
ಬೆಳಗ್ಗೆ 10.30ಕ್ಕೆ ಪ್ರಾಚಿನ& ನವೀನ ಸಂಸತ ಗ್ರಂಥಗಳಲ್ಲಿ ರಾಗ ಸಂಗೀತ, ಮಧ್ಯಾಹ್ನ 1.30ಕ್ಕೆ ರಾಗ ಲಕ್ಷಣ ಶ್ಲೋಕಗಳು ಮತ್ತು ಲಕ್ಷಣ ಗೀತೆಗಳು ಕುರಿತು ಕಾರ್ಯಕ್ರಮ ನಡೆಯಲಿದೆ. ಎಲ್ಲರಿಗೂ ಉಚಿತ ಪ್ರವೇಶ ಇರುತ್ತದೆ ಎಂದು ಹೇಳಿದರು. ಸಾಹಿತ್ಯ ಪ್ರಕಾಶನದ ಎಂ.ಎ. ಸುಬ್ರಮಣ್ಯ, ಆಕಿರ್ಟೆಕ್ಟ್ ವಿವೇಕ ಪವಾರ ಗೋಷ್ಠಿಯಲ್ಲಿದ್ದರು.