ಅ.2ಕ್ಕೆ ಕುರುಬ ಸಮುದಾಯ ಸಂಘಟನೆಗೆ ಸಮಾವೇಶ

Published on

ಮೈಸೂರು: ಕುರುಬ ಸಮುದಾಯದ ಸಂಘಟನೆಗಾಗಿ ಬೆಳಗಾವಿಯಲ್ಲಿ ಅ. 2 ಮತ್ತು 3ರಂದು ಸಮಾವೇಶ ನಡೆಯಲಿದೆ ಎಂದು ಶಫರ್ಡ್ ಇಂಡಿಯಾ ಇಂಟರ್ ನ್ಯಾಷನಲ್ ರಾಜ್ಯ ಉಪಾಧ್ಯಕ್ಷ ಚಂದ್ರಕುಮಾರ್ ತಿಳಿಸಿದರು.
ರಾಜ್ಯ ಅಲ್ಲದೆ, ದೇಶದ ವಿವಿಧ ಭಾಗದಲ್ಲಿ ಇರುವ ಕುರುಬ ಸಮಯದಾಯದವರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದು, ಅ.3ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಗುವುದು ಎಂದು ನಗರದಲ್ಲಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ದೇಶ, ವಿದೇಶದಲ್ಲಿರುವ ಕುರುಬ ಸಮಯದಾಯವನ್ನು ಸಂಘಟಿಸುವ ಉದ್ದೇಶದಿಂದ ಶರ್ಪರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ಸ್ಥಾಪಿಸಲಾಗಿದೆ. ಈಗ 9 ವರ್ಷ ಕಳೆದಿದ್ದು, ದೇಶದ ವಿವಿಧ ರಾಜ್ಯಗಳಲ್ಲಿ ಸಮಾವೇಶ ನಡೆಸಲಾಗಿದೆ. ಈಗ ಬೆಳಗಾವಿಯಲ್ಲಿ ಕಾರ್ಯಕಾರಿಣಿ ಹಾಗೂ ಸಮಾವೇಶ ನಡೆಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಬಿ.ಎನ್.ದೊಳ್ಳೇಗೌಡ ಮಾತನಾಡಿ, ಸಮುದಾಯ ಸಂಘಟನೆಗಾಗಿ ಜಿಲ್ಲಾ, ತಾಲೂಕು ಮಟ್ಟದಲ್ಲಿಯೂ ಸಮಿತಿಗಳನ್ನು ರಚಿಸಲಾಗುವುದು. ಇದರಿಂದ ಜನಾಂಗ ಸಂಘಟನೆಗೆ ಅನುಕೂಲವಾಗಲಿದೆ. ಸಿದ್ದರಾಮಯ್ಯ ಅವರು ನಮ್ಮ ನಾಯಕರಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವ ಸಾಮರ್ಥ್ಯ ಅವರಿಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net