

ಚಿತ್ರದುರ್ಗ: ಚಿತ್ರದುರ್ಗ ಬಾದರದಿನ್ನಿ ಆರ್ಟ್ಸ್‌ಅಕಾಡೆಮಿ,ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಆಶ್ರಯದಲ್ಲಿ ಅ.20ರಿಂದ 2 ದಿನಗಳ ಕಾಲ ನಗರದ ತರಾಸು ರಂಗಮಂದಿರದಲ್ಲಿ ಬಾದರದಿನ್ನಿ ರಂಗೋತ್ಸವ-ಗೀತ ಗಾಯನ,ನಾಟಕಗಳ ಪ್ರದರ್ಶನ ಏರ್ಪಡಿಸಲಾಗಿದೆ. 20 ರಂದು ಸಂಜೆ 5.30ಕ್ಕೆ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಾನಿಧ್ಯದಲ್ಲಿ ನಟಿ ಸಿತಾರ ಕಾರ‌್ಯಕ್ರಮ ಉದ್ಘಾಟಿಸಲಿದ್ದಾರೆ.
ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್ ಅಧ್ಯಕ್ಷತೆ ವಹಿಸಲಿದ್ದು,ಗಣ್ಯರು ಉಪಸ್ಥಿತರಿರುತ್ತಾರೆ. ಅಕಾಡೆಮಿ ಕಲಾವಿದರು ಒಂದು ಸಾವಿನ ಸುತ್ತ ನಾಟಕ ಪ್ರದರ್ಶಿಸಲಿದ್ದಾರೆ.
21ರಂದು ಸಂಜೆ 5.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ರಂಗಕರ್ಮಿ ಸಾಂಬಶಿವ ದಳವಾಯಿ ಮತ್ತಿತರರು ಉಪಸ್ಥಿತರಿರುತ್ತಾರೆ. ಚನ್ನಬಸಣ್ಣ ತಂಡದವರಿಂದ ಗೀತ ಗಾಯನ,ಏಕವ್ಯಕ್ತಿ ರಂಗ ಪ್ರಯೋಗ ತಾಯಿಯಾಗುವುದೆಂದರೆ ನಾಟಕ ಪ್ರದರ್ಶನ ನಡೆಯಲಿದೆ ಎಂದು ಅಕಾಡೆಮಿ ಕಾರ‌್ಯದರ್ಶಿ ಪ್ರಕಾಶ್ ಬಾದರದಿನ್ನಿ ತಿಳಿಸಿದ್ದಾರೆ.