ಅ. 20 ರಂದು ವಿದ್ಯುತ್ ವ್ಯತ್ಯಯ

Published on

ಬಳ್ಳಾರಿ : ಗ್ರಾಮೀಣ ವ್ಯಾಪ್ತಿಯ ಹಲಕುಂದಿ ಉಪ-ಕೇಂದ್ರದ ವಿದ್ಯುತ್ ವಿತರಣಾ ಕೇಂದ್ರದಿಂದ, ವಿದ್ಯುತ್ ಸರಬರಾಜು ಆಗುವ ಮಾರ್ಗದಲ್ಲಿ ಲಿಂಕ್‌ಲೈನ್ ಕಾಮಗಾರಿ ಕಾರ್ಯವನ್ನು ತುರ್ತಾಗಿ ಕೈಗೊಳ್ಳುತ್ತಿರುವುದರಿಂದ ಅ. 20 ರಂದು ಬೆಳಗ್ಗೆ 09 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮೋಹನಬಾಬು ತಿಳಿಸಿದ್ದಾರೆ.ವಿದ್ಯುತ್ ವ್ಯತ್ಯಯ ಪ್ರದೇಶಗಳು : ಆಗ್ರೋಟೇಕ್ ಕೋಲ್ಡ್ ಸ್ಟೋರೇಜ್, ಸೂಗುರೇಶ್ವರ ರೈಸ್ ಮಿಲ್, ಸಾಯಿ ಗಣೇಶ್ ಕಾಟನ್ ಜಿನ್ನಿಂಗ್, ಶ್ರೀಶರಣ ಕಾಟನ್ ಜಿನ್ನಿಂಗ್, ಪಾಲಿ ಚೀಲಗಳು, ಕಾರ್ತಿಕ್ ಕಾಟನ್ ಜಿನ್ನಿಂಗ್ , ಕೇಶವ ಮತ್ತು ಬ್ರಿಕ್ಸ್, ಆದಿತ್ಯ ಎಂಟರ್‌ಪ್ರೆಸ್ಸಸ್, ಸ್ಕಂದಾ ಗ್ಯಾಸ್, ಸ್ನೇಹಾ ಗ್ಲಾಸಸ್ ವ್ಯತ್ಯಯವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net