ಅ.19ರಂದು ಬಸವಾನುಭವ ಮಂಟಪ ನೂತನ ಕಟ್ಟಡ ಉದ್ಘಾಟನೆ

Published on

ಚಾಮರಾಜನಗರ: ತಾಲೂಕಿನ ಮೇಲಾಜಿಪುರ ಗ್ರಾಮದಲ್ಲಿ ಅ.19ರಂದು ಬಸವಾನುಭವ ಮಂಟಪ ನೂತನ ಕಟ್ಟಡ ಉದ್ಘಾಟನೆ ಮತ್ತು ಲಿಂಗಾಯತ ಧರ್ಮ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಗ್ರಾಮದ ರಾಜಶೇಖರಪ್ಪ ಅವರ ತೋಟದಲ್ಲಿರುವ ಮಠದಲ್ಲಿ ಬೆಳಗ್ಗೆ 10 ಗಂಟೆಗೆ ಶುರುವಾಗಲಿರುವ ಕಾರ್ಯಕ್ರಮದಲ್ಲಿ ಪಡಗೂರಿನ ಅಡವಿ ಮಠದ ಶ್ರೀಶಿವಲಿಂಗೇಂದ್ರಸ್ವಾಮೀಜಿ ಸಾನಿಧ್ಯವಹಿಸುವರು. ಇದಕ್ಕೂ ಮೊದಲು ಬೆಳಗ್ಗೆ 7 ಗಂಟೆಗೆ ಶ್ರೀಮುರುಘರಾಜೇಂದ್ರಸ್ವಾಮಿ ಮಹಾಸಂಸ್ಥಾನದ ಮಠಾಧ್ಯಕ್ಷ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಅವರ ಪಾದಪೂಜೆ ನಡೆಯಲಿದೆ. ಬೆಳಗಾವಿಯ ಬಸವಬೆಳವಿ ಚರಂತೇಶ್ವರ ಚರತಿಮಠದ ಶರಣಬಸವಸ್ವಾಮೀಜಿ ಪ್ರವಚನ ನೀಡುವರು. ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಚನ್ನಬಸವಸ್ವಾಮೀಜಿ ಕಾರ್ಯಕ್ರಮ ಉದ್ಘಾಟನೆ ಮಾಡುವರು.

ಮೂಡುಗೂರು ಉದ್ದಾನೇಶ್ವರ ವಿರಕ್ತ ಮಠದ ಉದ್ದಾನಸ್ವಾಮೀಜಿ, ಕಬ್ಬಹಳ್ಳಿಯ ಜಂಗಮ ಮಠದ ಗುರುಸಿದ್ದಸ್ವಾಮಿ ಬಸವಯೋಗಿ ಪ್ರಭುಸ್ವಾಮಿ ಉಪಸ್ಥಿತಿವಹಿಸುವರು. ಬಸವಾನುಭವ ಮಂಟಪದ ಶಿವಬಸವಸ್ವಾಮಿ, ಗುರುಮಲ್ಲೇಶ್ವರ ದಾಸೋಹ ಮಠದ ಮಹಾದೇವಸ್ವಾಮಿ, ನಾಗೇಂದ್ರಸ್ವಾಮಿ ನೇತೃತ್ವವಹಿಸುವರು. ಅ.18ರಂದು ರಾತ್ರಿ 9 ಗಂಟೆಗೆ ವಿವಿಧ ತಂಡಗಳಿಂದ ಭಜನೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net