ಚಾಮರಾಜನಗರ: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ಅ.15ರಂದು ಜಿಲ್ಲೆಯ ವಿವಿಧ ಕಡೆಗಳಲ್ಲಿ ವಿದ್ಯುತ್ ಅದಾಲತ್ ಹಮ್ಮಿಕೊಳ್ಳಲಾಗಿದೆ.
ಸಂತೇಮರಹಳ್ಳಿ ಉಪವಿಭಾಗದ ಹೊಂಗನೂರು ವ್ಯಾಪ್ತಿಯ ಮುರಟಿಪಾಳ್ಯ, ಬೇಗೂರು ಉಪವಿಭಾಗದ ಕಬ್ಬಳ್ಳಿ ವ್ಯಾಪ್ತಿಯ ಸಂಪಿಗೆಪುರ, ಹರದನಹಳ್ಳಿ ಉಪವಿಭಾಗದ ಅರಕಲವಾಡಿ ಶಾಖೆಯ ನಿಜಲಿಂಗನಪುರದಲ್ಲಿ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಶುರುವಾಗಲಿದೆ. ಗ್ರಾಹಕರು ವಿದ್ಯುತ್ ಸಂಬಂಧಿತ ಕುಂದು ಕೊರತೆಗಳಿದ್ದಲ್ಲಿ ಪರಿಹರಿಸಿಕೊಳ್ಳುವಂತೆ ಸೆಸ್ಕ್ ಪ್ರಕಟಣೆಯಲ್ಲಿ ಕೋರಿದೆ.