

ಬೆಂಗಳೂರು: ಸದಾ ಬಂದೋಬಸ್ತ್, ಆರೋಪಿಗಳ ಪತ್ತೆ. ಹೀಗೆ ಒಂದಿಲ್ಲೊಂದು ಕರ್ತವ್ಯದಲ್ಲಿ ನಿರತರಾಗಿರುವ ಪೊಲೀಸರು ಚಲನಚಿತ್ರ ಗೀತೆಗಳಿಗೆ ಡಾನ್ಸ್ ಮಾಡಿ ರಿಲಾಕ್ಸ್ ಮಾಡಿದರು.
ಈಶಾನ್ಯ ವಿಭಾಗದ ಡಿಸಿಪಿ ಡಾ. ಭೀಮಾಶಂಕರ್ ಗುಳೇದ್, ತಮ್ಮ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗೆ ನಾಗವಾರದ ಮಾನ್ಯತಾ ಟೆಕ್ ಪಾರ್ಕ್ನಲ್ಲಿ ಜುಂಬಾ ಡಾನ್ಸ್ ಆಯೋಜಿ ಸಿದ್ದರು. ಇಲ್ಲಿ ಪೊಲೀಸರು ಸಿನಿಮಾ ಗೀತೆಗಳಿಗೆ ನೃತ್ಯ ಮಾಡಿದ ವಿಡಿಯೋಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ. ‘ಟಗರು’, ‘ಅವನೇ ಶ್ರೀಮನ್ನಾನಾರಾಯಣ’, ‘ವಿಲನ್’ ಮುಂತಾದ ಚಿತ್ರಗಳ ಜನಪ್ರಿಯ ಹಾಡುಗಳಿಗೆ ಪೊಲೀಸರು ಕುಣಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಟ ಪುನೀತ್ ರಾಜ್ಕುಮಾರ್, ಪ್ರತಿ ದಿನ ಅಪರಾಧ ಕೃತ್ಯಗಳನ್ನು ಪತ್ತೆ ಹಚ್ಚುವ, ಸಮಾಜ ಕಾಯುವ ಪೊಲೀಸರು ನಿಜವಾದ ಹೀರೋಗಳು. ಜೀವನವಿಡೀ ಜನರ ಸೇವೆಗೆ ಮುಡುಪಾಗಿಡುವ ಅವರ ಸೇವೆ ಶ್ಲಾಘನೀಯ ಎಂದರು.
ಯಾವುದೇ ಕಾರ್ಯಕ್ರಮ ಮುಕ್ತಾಯದ ಬಳಿಕ ಹಲವರನ್ನು ವಂದನೆ ಹೇಳುತ್ತೇವೆ. ಆದರೆ, ಸಮಾರಂಭ ಸುಸೂತ್ರವಾಗಿ ನಡೆಯಲು ಮುಖ್ಯ ಕಾರಣರಾದ ಪೊಲೀಸರಿಗೆ ಧನ್ಯವಾದ ಹೇಳುವು ದನ್ನೇ ಮರೆಯುತ್ತೇವೆ ಎಂದು ಅಪ್ಪಾಜಿ (ಡಾ.ರಾಜ್) ಹೇಳುತ್ತಿದ್ದರು ಎಂದು ಪುನೀತ್ ಸ್ಮರಿಸಿದರು.
ಇನ್ಸ್ಪೆಕ್ಟರ್ಗಳಾದ ಬಿ. ರಾಮಮೂರ್ತಿ, ಸಿದ್ದರಾಜು, ಮುತ್ತುರಾಜು, ಬಿ.ಎಸ್. ನಂದ ಕುಮಾರ್, ವಿ. ಅನಿಲ್ಕುಮಾರ್ ಹಾಗೂ ಚೇತನ್ ಕುಮಾರ್ ಅವರಿಗೆ ‘ಕಾಪ್ ಆಫ್ ದಿ ಮಂತ್’ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.