

ಬೆಳಗಾವಿ: ನಗರದ ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿ ಬುಧವಾರ ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನ ಆಚರಿಸಲಾಯಿತು.
ಬಳಿಕ ಜಿಪಂಉಪ ಕಾರ್ಯದರ್ಶಿ ಬಸವರಾಜ್ ಹೆಗ್ಗನಾಯಕ ಮಾತನಾಡಿ, ಮಹಾತ್ಮಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶಕ್ಕೆ ನೀಡಿದ ಕೊಡುಗೆ ಅಪಾರವಾಗಿದ್ದು, ಅವರ ಜೀವನ ಮೌಲ್ಯ ಸಂದೇಶಗಳನ್ನು ಎಲ್ಲರೂ ಪಾಲಿಸಬೇಕೆಂದು ಎಂದು ತಿಳಿಸಿದರು.
ಜಿಪಂ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ ಮಾತನಾಡಿ,ಅಹಿಂಸಾ ಚಳುವಳಿಯ ಮೂಲಕ ದೇಶಕ್ಕೆ ಸ್ವಾತಂತ್ರವನ್ನು ಕೊಟ್ಟ ಮಹಾತ್ಮಗಾಂಧಿಜಿಯರು ಇಡಿ ಜಗತ್ತಿ ಅಹಿಂಸೆಯ ಮಹತ್ವನ್ನು ತಿಳಿಸಿಕೊಟ್ಟಿದ್ದು ಎಲ್ಲರು ಅಹಿಂಸೆಯ ಮಾರ್ಗವನ್ನು ಮೈಗೂಡಿಕೊಳ್ಳಬೇಕೆಂದು
ಜಿಪಂ ಯೋಜನಾ ನಿರ್ದೇಶಕ ರವಿ ಎನ್. ಬಂಗಾರೆಪ್ಪನವರ ಹೇಳಿದರು.ಮಹಾತ್ಮಗಾಂಧಿಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸರಳತೆಯನ್ನು ತಮ್ಮ ಜೀವನದುದ್ದಕ್ಕು ಅಳವಡಿಸಿಕೊಂಡ ಮಹಾನ್ ವ್ಯಕ್ತಿಗಳು ಅದರಂತೆ ನಾವು ಕೂಡ ಅವರ ಸರಳತೆ ಹಾಗೂ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಜಿ.ಪಂ. ಉಪ ಕಾರ್ಯದರ್ಶಿ ಬಸವರಾಜ ಅಡವಿಮಠ, ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ, ಅಕ್ಷರದಾಸೋಹ ಶಿಕ್ಷಣಾಧಿಕಾರಿ ಲಕ್ಷ್ಮಣರಾವ್ ಯಕ್ಕುಂಡಿ, ಸಹಾಯಕ ನಿರ್ದೇಶಕಿ ಜಯಶ್ರೀ ನಂದೇನ್ನವರಿ ಇತರರಿದ್ದರು.