ಜಿಪಂ ಸದಸ್ಯ ಕೊಪ್ಪದ ಕಾರ್ಯ ಶ್ಲಾಘನೀಯ

13KLD1-Web
ಕುಲಗೋಡದಲ್ಲಿ ಜಿಪಂ ಸದಸ್ಯ ಗೋವಿಂದ ಕೊಪ್ಪದ ಮನೆಮನೆಗೆ ನೀರಿನ ಕ್ಯಾನ್ ವಿತರಿಸಿದರು. ಶಿವಾನಂದ ಸ್ವಾಮೀಜಿ, ಬಸನಗೌಡ ಪಾಟೀಲ, ಚನ್ನಮಲ್ಲಿಕಾರ್ಜುನ ಯಕ್ಸಂಬಿ ಇತರರು ಇದ್ದರು.
Published on

ಕುಲಗೋಡ: ಅನ್ನ ಇಲ್ಲದೆ ತಿಂಗಳು ಕಳೆಯಬಹುದು. ನೀರು ಇಲ್ಲದೆ ಜೀವನ ಕಳೆಯಲಾಗದು ಎಂದು ಶಿವಾನಂದ ಸ್ವಾಮೀಜಿ ಹೇಳಿದ್ದಾರೆ.
ಗ್ರಾಮದ ಬಸ್ ನಿಲ್ದಾಣದ ಆವರಣದಲ್ಲಿ ಜಿಪಂ ಸದಸ್ಯ ಗೋವಿಂದ ಕೊಪ್ಪದ ಅವರಿಂದ ಉಚಿತವಾಗಿ ಮನೆಮನೆಗೆ 20 ಲೀಟರ್ ನೀರಿನ ಕ್ಯಾನ್ ವಿತರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಅರಬಾವಿ ಕ್ಷೇತ್ರದಲ್ಲಿ ಶಾಸಕರ ಮಾರ್ಗದರ್ಶನದಲ್ಲಿ 15 ವರ್ಷಗಳಲ್ಲಿ ಕೊಪ್ಪದ ಮಾಡಿದ ಜನೋಪಯೋಗಿ ಕೆಲಸ ಶ್ಲಾಘನೀಯ ಎಂದರು.

ಜಿಪಂ ಸದಸ್ಯ ಗೊವಿಂದ ಕೊಪ್ಪದ ಮಾತನಾಡಿ, 3 ವರ್ಷಗಳ ಹಿಂದೆ ಸ್ವಂತ ಹಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದೆ. ಪ್ರತಿ ಮನೆಗೆ ಒಂದರಂತೆ 1500 ಕ್ಕೂಕ್ಯಾನ್ ವಿತರಣೆ ಮಾಡುತ್ತಿದ್ದೇವೆ ಎಂದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗ್ರಾಮಸ್ಥರನ್ನು ಸತ್ಕರಿಸಲಾಯಿತು. ಬಸನಗೌಡ ಪಾಟೀಲ, ಚನ್ನಮಲ್ಲಿಕಾರ್ಜುನ ಯಕ್ಸಂಬಿ, ಐ.ಎಫ್. ಧಪೇದಾರ, ಭೀಮಶಿ ಪೂಜೇರಿ, ಗಿರೀಶ ಹಳ್ಳೂರ, ರಾಜು ಯಕ್ಸಂಬಿ, ಬಸವಣ್ಣೆಪ್ಪ ತಿಪ್ಪಿಮನಿ, ಶ್ರೀಪತಿ ಗಣಿ, ತಮ್ಮಣ್ಣ ದೇವರ, ಸದಾಶಿವ ದೇವರ, ರಾಮಣ್ಣ ಕುರುಬಚನ್ನಾಳ ಇತರರಿದ್ದರು. ಬಸವರಾಜ ಬಿಲಕುಂದಿ ಸ್ವಾಗತಿಸಿದರು. ಬಸವರಾಜ ಕೋಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net