ಕಸ ವಿಲೇವಾರಿಗೆ ಹೆಚ್ಚಿನ ಒತ್ತು ನೀಡಿ : ಸಿಇಒ ರಾಹುಲ್ ಶಿಂಧೆ

IMG-20240529-WA0024.jpg
Published on

ಬೆಳಗಾವಿ :ಸಾಂಬ್ರಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿಯಾಗಿತ್ತಿಲ್ಲ. ರಸ್ತೆ ಎರಡು ಬದಿಯಲ್ಲಿ ಜನರು ಕಸ ಬಿಸಾಕುತಿದ್ದು ಅಲ್ಲದೇ ಈ ಗ್ರಾಮದಲ್ಲಿ ಜನದಟ್ಟನೆ ಹೆಚ್ಚಾಗಿರುವುದರಿಂದ ಕಸ ವಿಲೇವಾರಿಗೆ ಹೆಚ್ಚಿನ ಒತ್ತು ನೀಡಬೇಕೆಂದು ಜಿಪಂ ಸಿಇಒ ರಾಹುಲ್ ಶಿಂಧೆ ಅವರು ಸೂಚಿಸಿದರು.

ಸಾಂಬ್ರಾ ಗ್ಗ್ರಾಮದಲ್ಲಿ ವಿಮಾನ ನಿಲ್ದಾಣ ಇರುವುದರಿಂದ ಪ್ರಯಾಣಿಕರ/ಸಾರ್ವಜನಿಕರ ಓಡಾಟ ಹೆಚ್ಚಾಗಿದ್ದು ಅಲ್ಲದೇ ಗ್ರಾಮದಲ್ಲಿ ಜನ ಸಂಖ್ಯೆಯು ಕೂಡಾ ಹೆಚ್ಚಾಗಿರುವುದರಿಂದ ಕಸದ ಸಂಗ್ರಹ ಪ್ರಮಾಣ ಅಧಿಕವಾಗಿರುತ್ತದೆ. ಆದ ಕಾರಣ ಕಸವನ್ನು ಎಲ್ಲೆಂದರಲ್ಲಿ ಬಿಸಾಡದೆ ನಿಗಧಿಪಡಿಸಲಾದ ಸ್ಥಳದಲ್ಲಿ ಕಸ ವಿಲೇವಾರಿ ಮಾಡಲು ಪಂಚಾಯತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹೆಚ್ಚಿನ ಆದ್ಯತೆ ನೀಡಿ ಸ್ವಶ್ಚತೆ ಕಾಪಾಡಬೇಕು. ಇದರಿಂದಾಗಿ ಸ್ಥಳಿಯರಿಗೆ ಹಾಗೂ ಬೇರೆ ಪ್ರದೇಶಗಳಿಂದ ಬರುವ ಜನರಿಗೆ ಅನುಕೂಲವಾಗುತ್ತದೆ. ಮುಂದಿನ ದಿನಗಳಲ್ಲಿ ಸ್ವಚ್ಛತೆ ಕಾಣದಿದ್ದರೆ ಸಂಬಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿವುದು ಎಂದು ಸಾಂಬ್ರಾ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಎಚ್ಚರಿಸಿದರು.

ನಿಯಮಾನುಸಾರ ಕರ ಪರಿಷ್ಕರಣೆ ಮಾಡಿ ಸಾಂಬ್ರಾ ವಿಮಾಣ ನಿಲ್ದಾಣ ಮತ್ತು ರಸ್ತೆ ಪಕ್ಕದಲಿ ಇರುವ ಎಲ್ಲ ಅಂಗಡಿಗಳಿಂದ ಕಡ್ಡಾಯವಾಗಿ ಕರ ವಸೂಲಿ ಮಾಡಬೇಕು. ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ಕರ ವಸೂಲಿಗೆ ಹೆಚ್ಚಿನ ಒತ್ತು ನೀಡಿ ಪ್ರತಿ ತಿಂಗಳು ಕರ ವಸೂಲಿ ಮಾಡಬೇಕು ಎಂದು ತಿಳಿಸಿದರು.

ಈ ವೇಳೆ ತಾಪಂ. ಕಾರ್ಯನಿರ್ವಾಹಕ ಅಧಿಕಾರಿ ರಾಮರಡ್ಡಿ ಪಾಟೀಲ್, ಸಹಾಯಕ ನಿರ್ದೇಶಕ ಬಸವಂತ ಕಡೆಮನಿ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಸಿದ್ದಲಿಂಗ ಸರೂರ ಹಾಗೂ ಪಂಚಾಯತ ಸಿಬ್ಬಂದಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net