ಕಲ್ಮಲಾ ಗ್ರಾಮದ ಬಹುಗ್ರಾಮ ಕುಡಿಯುವ ನೀರಿನ ಕೆರೆಗೆ ಜಿಪಂ ಸಿಇಒ ಭೇಟಿ

RAICHUR
RAICHUR
Published on

ರಾಯಚೂರು ತಾಲೂಕಿನ ಕಲ್ಮಲಾ ಗ್ರಾಮದ ಜಲಜೀವನ್ ಮಿಷನ್ ಯೋಜನೆಯಡಿ ಅನುಷ್ಠಾನ ಮಾಡುತ್ತಿರುವ ಬಹುಗ್ರಾಮ ಕುಡಿಯುವ ನೀರಿನ ಕೆರೆ ಕಾಮಗಾರಿ ಸ್ಥಳಕ್ಕೆ ಜಿಪಂ ಸಿಇಓ ರಾಹುಲï ತುಕಾರಾಂ ಪಾಂಡ್ವೆ ಅವರು ಬುಧವಾರ ಭೇಟಿ ನೀಡಿ ವೀಕ್ಷಣೆ ಮಾಡಿದರು.

ನಂತರ ಕೆರೆ ಅನುಷ್ಠಾನ ಮಾಡುವ ಅಽಕಾರಿಗಳೊಂದಿಗೆ ಸಿಇಓ ಅವರು ಚರ್ಚೆಸಿ ಬಾಕಿಯಿರುವ ಕೆರೆ ಕಾಮಗಾರಿಯನ್ನು ಈ ತಿಂಗಳ ಅಂತ್ಯಕ್ಕೆ ಪೂರ್ಣಗೊಳಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಅತಿ ಮುಖ್ಯವಾಗಿ ಕೆರೆಯಲ್ಲಿ ಸ್ಟೋನï ಪೀಚಿಂಗï, ಮರಂ ಹಾಕಿ ಸಮತಟ್ಟು ಮಾಡಬೇಕು ಹಾಗೂ ಕೆರೆಗೆ ಸಂಬAಧಪಟ್ಟಿರುವ ಎ¯್ಲÁ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜೆಇ ಅವರಿಗೆ ಸೂಚಿಸಿದರು.

ಏಪ್ರಿಲï ಮೊದಲ ವಾರದಲ್ಲಿ ಕೆನಾಲï ಮುಖಾಂತರ ನೀರು ಹರಿಸುವ ವೇಳೆಗೆ ಕಾಮಗಾರಿಯು ಪೂರ್ಣಗೊಳಿಸಿ ಕೆರೆಯನ್ನು ಭರ್ತಿ ಮಾಡಬೇಕು. ಈ ಕೆರೆ ಮೇಲೆ ಅವಲಂಬಿತರಾದ ಜನ, ಜÁನುವಾರುಗಳಿಗೆ ಕುಡಿಯುವದಕ್ಕೆ ನೀರು ಲಭ್ಯವಾಗುವಂತೆ ಅಗತ್ಯ ಕ್ರಮ ವಹಿಸಬೇಕೆಂದು ನಿರ್ದೇಶನ ನೀಡಿದರು.

ನಂತರ ಕಲ್ಮಲಾ ರಸ್ತೆ ಮಾರ್ಗ ಮಧ್ಯದಲ್ಲಿ ರೈತರು ಹೊಲದಲ್ಲಿ ಮೇಣಸಿನಕಾಯಿ ಬಿಡಿಸುವ ಕೆಲಸ ಮಾಡುವದನ್ನು ಗಮನಿಸಿ ಸಿಇಓ ಅವರು ಅವರ ಬಳಿಗೆ ತೆರಳಿ ಗ್ರಾಮ ಪಂಚಾಯತಿಯಿAದ ನಿಮಗೆ ನರೇಗಾದಡಿ ಕೆಲಸ ನೀಡಲಾಗುತ್ತಿದಿಯೇ ಎಂದು ಪ್ರಶ್ನಿಸಿದರು.? ಕೂಲಿಕಾರರು ಸದ್ಯ ನಮಗೆ ರೈತರ ಹೊಲಗಳಲ್ಲಿ ಮೇಣಸಿನಕಾಯಿ ತೆಗೆಯುವ ಕೆಲಸವಿದೆ. ಇದು ಮುಗಿದ ನಂತರ ನರೇಗಾದಡಿ ಕೆಲಸ ನೀಡುವಂತೆ ಮನವಿ ಮಾಡಲಾಯಿತು.

ಗ್ರಾಮ ಪಂಚಾಯತಿ ಪಿಡಿಒಗೆ ಜನರಿಂದ ಕೆಲಸಕ್ಕಾಗಿ ಬೇಡಿಕೆ ಸಂಗ್ರಹಿಸಿ -Áರಂ ೬ ಭರ್ತಿ ಮಾಡಲು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಭು ಚವ್ಹಾಣ, ಜೆಇ ದೊಡ್ಡಬಸಪ್ಪ, ಶಾಖಾಽಕಾರಿಗಳು, ಪಿಡಿಓ, ಕಾರ್ಯದರ್ಶಿ ಹಾಗೂ ಗ್ರಾ.ಪಂ ಸಿಬ್ಬಂದಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net