

ಮೈಸೂರು: ಮೈಸೂರು: ತಿ.ನರಸೀಪುರ ತಾಲೂಕು ಬನ್ನೂರು ಹೋಬಳಿ ವ್ಯಾಪ್ತಿಯ ಚಾಮನಹಳ್ಳಿ ಕೆರೆಗೆ ಮೈಸೂರು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಾಮನಹಳ್ಳಿ ಕೆರೆಯ ಮೀನುಪಾಶವಾರು ಹಕ್ಕನ್ನು ಶ್ರೀ ಚಾಮುಂಡೇಶ್ವರಿ ಮೀನುಗಾರರ ಸಹಕಾರ ಸಂಘ ಚಾಮನಹಳ್ಳಿಗೆ ವಹಿಸಲಾಗಿದ್ದು, ಸದರಿ ಕೆರೆಯಲ್ಲಿ ಪಾಲನೆಯಲ್ಲಿರುವ ರೋಹು ತಳಿ ಮೀನುಮರಿಗಳ ಬೆಳವಣಿಗೆ ಪರಿಶೀಲಿಸಿದರು.
ಸಹಕಾರ ಸಂಘದಿಂದಲೇ ಮೀನು ಮಾರಾಟ ಮಾಡುವುದರಿಂದ ದಲ್ಲಾಳಿಗಳ ಮಧ್ಯಸ್ಥಿಕೆ ಇಲ್ಲದೇ ಹೆಚ್ಚಿನ ಲಾಭ ಗಳಿಸಬಹುದಾಗಿದೆ ಎಂದು ಸಹಕಾರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಸಲಹೆ ನೀಡಿದರು.
ಮೀನು ಮಾರಾಟ ಮಾಡಲು ಹಾಗೂ ಉಪಹಾರ ಗೃಹ ಮಾಡಲು ಸ್ಥಳಾವಕಾಶ ಕಲ್ಲಿಸಿಕೊಡುವಂತೆ ಹಾಗೂ ಕೆರೆಯಲ್ಲಿ ಬೆಳೆದಿರುವ ಜಲಸಸ್ಯ, ಕೆರೆಯ ಏರಿ ದುರಸ್ತಿ ಮತ್ತು ಹೂಳು ತೆಗೆಸಿಕೊಡುವಂತೆ ಸಂಘದ ಅಧ್ಯಕ್ಷ ಮನವಿ ಮಾಡಿದರು. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾತನಾಡಿ, ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಿ ನಿಯಮಾನುಸಾರ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕರು ಮಂಜುನಾಥ್ ಇತತರು ಇದ್ದರು.