ಕಿರೇಸೂರ ಕೆರೆಗೆ ಜಿಪಂ ಸಿಇಒ ಭೇಟಿ

ZP CEO visit
Published on

ಕುಂದಗೋಳ: ತಾಲೂಕಿನ ಕಿರೇಸೂರ ಗ್ರಾಮದ ಪಕ್ಕದಲ್ಲಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕೆರೆಗೆ ಜಿಪಂ ಸಿಇಒ ಸ್ವರೂಪಾ ಟಿ.ಕೆ. ಅವರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಕೆರೆಯ ಸುತ್ತಮುತ್ತಲಿನ ಪೈಪ್‌ಲೈನ್ ಹಾಗೂ ಕೆರೆಯ ನೀರಿನ ಮಟ್ಟ ವೀಕ್ಷಿಸಿದ ಅವರು, ಬೆಳಗಾವಿ ಪ್ರಾದೇಶಿಕ ಆಯುಕ್ತರ ಆದೇಶದಂತೆ ಎಂಆರ್‌ಬಿಸಿ ಕಾಲುವೆಯಿಂದ ಕೆರೆಗೆ ನೀರು ಹರಿಸಲಾಗುತ್ತಿದೆ. ಈ ನೀರನ್ನು ಕುಡಿಯುವ ಉದ್ದೇಶ ಬಿಟ್ಟು ಬೇರೆಯದಕ್ಕೆ ಬಳಸಬಾರದು. ನೀರು ಪೋಲು ಮಾಡದಂತೆ ಹಾಗೂ ಬೇರೆ ಉದ್ದೇಶಕ್ಕೆ ನೀರು ಉಪಯೋಗಿಸದಂತೆ ನೋಡಿಕೊಳ್ಳಲು ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳದಲ್ಲಿರಬೇಕು. 14 ಗ್ರಾಮಗಳಿಗೆ ಸರಿಯಾದ ರೀತಿಯಲ್ಲಿ ನೀರು ಸರಬರಾಜು ಮಾಡಬೇಕು ಎಂದು ಸೂಚಿಸಿದರು.

ತಾಪಂ ಇಒ ಡಾ. ಮಹೇಶ ಕುರಿ, ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಸಹಾಯಕ ಅಧಿಕಾರಿ ಎ.ಜಿ. ಮಠಪತಿ, ಎ.ಐ. ನಾಯ್ಕರ ಹಾಗೂ ವಿವಿಧ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net