

ಬ್ಯಾಡಗಿ: ತಾಲೂಕಿನ ಕಾಗಿನೆಲೆ, ಕುಮ್ಮೂರು ಗ್ರಾಮಗಳಿಗೆ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರುಚಿ ಬಿಂದಲ್ ಭೇಟಿ ನೀಡಿ, ನರೇಗಾ ಕಾಮಗಾರಿ ವೀಕ್ಷಿಸಿದರು.
ಕಾಗಿನಲೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಅಪೌಷ್ಟಿಕತೆ ಮಕ್ಕಳು, ಕ್ಯಾನ್ಸರ್ ರೋಗಿಗಳು, ಗರ್ಭಿಣಿ ಮಹಿಳೆಯರ ಸೌಲತ್ತುಗಳ ಕುರಿತು ಮಾಹಿತಿ ಪಡೆದರು. ಬಳಿಕ ಅಲ್ಲಿ ನಿರ್ವಿುಸಿದ ನರೇಗಾ ಯೋಜನೆಯ ಉದ್ಯಾನ, ಕುಮ್ಮೂರು ಪಾಸಿ ಪದ್ಮಾವತಿ ಪ್ರೌಢಶಾಲೆಯ ಭೋಜನಾಲಯ, ಆಟದ ಮೈದಾನ, ಅಮೃತ ಸರೋವರ ಕೆರೆ ಯೋಜನೆ ಕಾಮಗಾರಿ, ಸಂಜೀವಿನಿ ಶೆಡ್ ಇತ್ಯಾದಿ ಮಾಹಿತಿ ಪಡೆದರು.
ತಾಪಂ ಸಹಾಯಕ ನಿರ್ದೇಶಕ ಪರಶುರಾಮ ಅಗಸನಹಳ್ಳಿ, ಪಿ.ಸಿ. ಮಹಾಂತೇಶ, ತಾಂತ್ರಿಕ ಸಂಯೋಜಕ ಸಂತೋಷ ನಾಯ್ಕ, ಸಂಯೋಜಕ ಅಕ್ಷಯ ಸಿ.ಜಿ., ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ ಕಟ್ಟೇಗೌಡರ, ಗದಿಗೆಪ್ಪ ಕೊಪ್ಪದ ಇತರರಿದ್ದರು.