ಜಲಜೀವನ ಮಿಷನ್‌ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರಿಗೆ ದಂಡ ವಿಧಿಸಿ

Dr.dilish Shashi
Published on

ಕಾರವಾರ: ಜಲಜೀವನ್ ಮಿಷನ್ (ಜೆಜೆಎಂ)ಕಾಮಗಾರಿಗಳನ್ನು ನಿಗದಿತ ಅವಽಯೊಳಗೆ ಪೂರ್ಣಗೊಳಿಸದ ಗುತ್ತಿಗೆದಾರರಿಗೆ ದಂಡ ವಿಽಸಿ ಎಂದು ಜಿಪಂ ಸಿಇಒ ಡಾ.ದಿಲೀಶ್ ಶಶಿ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭೂಸ್ವಾಧೀನ, ಅರಣ್ಯ ಇಲಾಖೆ, ಸಾರ್ವಜನಿಕರ ತೊಂದರೆ, ಹೆಸ್ಕಾಂ ಹೀಗೆ ವಿವಿಧ ಕಾರಣಗಳಿಂದ ಕಾಮಗಾರಿ ವಿಳಂಬವಾಗಿದ್ದರೆ ಅಂಥವರಿಗೆ ರಿಯಾಯಿತಿ ನೀಡಿ. ನ್ಯಾಯಾಲಯದಲ್ಲಿ ಇದ್ದರೆ ಅವುಗಳನ್ನು ಮುಟ್ಟಲು ಸಾಧ್ಯವಿಲ್ಲ. ಹೊರತುಪಡಿಸಿ ಇತರೇ ಕಾರಣಗಳಿಂದ ಕಾಮಗಾರಿ ಬಾಕಿ ಉಳಿಸಿರುವ ಗುತ್ತಿಗೆದಾರರ ಮೇಲೆ ಕ್ರಮ ವಹಿಸಿ ಎಂದರು.

ವಿಳಂಬವಾಗಿರುವ ಮತ್ತು ಪ್ರಗತಿಯಲ್ಲಿರುವ ಜೆಜೆಎಂ ಕಾಮಗಾರಿಗಳ ಬಗ್ಗೆ ವಿವರ ನೀಡಿದೆ. ಅದರ ಬಗ್ಗೆ ಪ್ರತ್ಯೇಕ ಸಭೆಯನ್ನು ಆಯೋಜನೆ ಮಾಡಿ ಚರ್ಚಿಸಲಾಗುವುದು ಎಂದರು. ಜಿಪಂ ಸಿಎಒ ಆನಂದ ಸಾ ಹಬೀಬ್, ಉಪ ಕಾರ್ಯದರ್ಶಿ ಅಲ್ಲಾ ಭಕ್ಷ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಧಾರವಾಡ ವಿಭಾಗದ ಇಂಜನೀಯರ್ ಆರ್.ಎಂ. ಸೊಪ್ಪಿಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net