ಸರ್ಕಾರಿ ಶಾಲೆಗೆ ನೆಲಸಮ ಭೀತಿ! : ತಿರುವೈಲಿನಲ್ಲಿ ಕಟ್ಟಡ ತೆರವಿಗೆ ಜಿಪಂ ಸಿಇಒ ಸೂಚನೆ: ಶಿಕ್ಷಣಪ್ರೇಮಿಗಳು ಗರಂ

New Project (18)
Published on

ಧನಂಜಯ ಗುರುಪುರ

ಶತಮಾನೋತ್ಸವ ಸಂಭ್ರಮದಲ್ಲಿರುವ ವಾಮಂಜೂರು ತಿರುವೈಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಸದೃಢ ಕಾರಣಗಳಿಲ್ಲದೇ ನೆಲಸಮವಾಗುವ ಆತಂಕ ಎದುರಾಗಿದೆ.

ರಾಷ್ಟ್ರೀಯ ಹೆದ್ದಾರಿ 169ರ ಕೆತ್ತಿಕಲ್ ಭಾಗದಲ್ಲಿ ವಿಸ್ತರಣೆ ಸಂದರ್ಭ ತಿರುವೈಲಿನ ಮಾದರಿ ಪ್ರಾಥಮಿಕ ಶಾಲಾ ಕಟ್ಟಡ ನೆಲಸಮಗೊಳಿಸಲು ಮಾರ್ಕ್ ಮಾಡಲಾಗಿತ್ತು. ಆದರೆ ನಂತರ ಸರ್ವೇಯಲ್ಲಿ ತುಸು ಬದಲಾವಣೆಯಾಗಿ ಶಾಲಾ ಕಟ್ಟಡ ನೆಲಸಮದಿಂದ ಪಾರಾಗಿತ್ತು. ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಕಂಪನಿ ಶಾಲಾ ಕಟ್ಟಡದ ಪಕ್ಕದಲ್ಲಿ ಹೆದ್ದಾರಿಗೆ ಹೊಂದಿಕೊಂಡಂತೆ ಬೃಹತ್ ತಡೆಗೋಡೆ ನಿರ್ಮಿಸಿ ಸ್ಥಳೀಯರ ಆತಂಕಕ್ಕೆ ತೆರೆ ಎಳೆದಿತ್ತು.

ಆದರೆ ಈಗ ಕೆಲ ದಿನಗಳ ಹಿಂದೆ ಸ್ಥಳೀಯರ ದೂರು ಆಲಿಸಿದ ಜಿ.ಪಂ ಕಾರ್ಯನಿರ್ವಣಾಧಿಕಾರಿ ಸ್ಥಳ ಪರಿಶೀಲನೆ ನಡೆಸಿ, ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಹಳೆಯ ಕಟ್ಟಡವನ್ನು ನೆಲಸಮಗೊಳಿಸಬೇಕು ಎಂದು ಸೂಚಿಸಿದ್ದು, ಇದಕ್ಕೆ ಶಾಲಾಭಿವೃದ್ಧಿ ಸಮಿತಿ ಹಾಗೂ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಶಾಲೆ ಶತಮಾನೋತ್ಸವ ಸಂಭ್ರಮದಲ್ಲಿದ್ದು, ಏಪ್ರಿಲ್ 5 ಮತ್ತು 6ರಂದು ಕಾರ್ಯಕ್ರಮ ನಡೆಯಲಿದೆ. ಶತಮಾನೋತ್ಸವ ನೆನಪಿಗಾಗಿ ನಿರ್ಮಾಣವಾಗುತ್ತಿರುವ ಹೊಸ ಕಟ್ಟಡಕ್ಕೆ ತರಗತಿಗಳು ಸದ್ಯದಲ್ಲೇ ಸ್ಥಳಾಂತರವಾಗಲಿವೆ. ಆದರೆ ಹಳೆ ಕಟ್ಟಡ ನೆಲಸಮಗೊಳಿಸುವ ಅವಶ್ಯಕತೆ ಇಲ್ಲ. 100 ವರ್ಷದವರೆಗೆ ಶಾಲಾ ಕಟ್ಟಡದ ಬಗ್ಗೆಯಾಗಲೀ, ಮಕ್ಕಳ ಸಂಖ್ಯೆ ಹೆಚ್ಚಿಸುವ ಬಗ್ಗೆ ಚಕಾರ ಎತ್ತದ ಕೆಲವರು ಹಳೆಯ ಕಟ್ಟಡ ನೆಲಸಮಗೊಳಿಸುವಂತೆ ಜಿ.ಪಂ.ಗೆ ದೂರು ನೀಡಿದ್ದಾರೆ. ಇನ್ನೂ 50 ವರ್ಷ ಬಾಳಿಕೆ ಬರಬಹುದಾದ ಕಟ್ಟಡ ನೆಲಸಮಕ್ಕೆ ಸಿಇಒ ಸೂಚಿಸಿದ್ದಾರೆ. ಶತಮಾನ ಕಂಡ ಶಾಲೆಯೊಂದಕ್ಕೆ ಅಧಿಕಾರಿ ಮಟ್ಟದಲ್ಲಿ ಷಡ್ಯಂತ್ರ ನಡೆಯುತ್ತಿದೆ ಎಂಬ ಆರೋಪಗಳೂ ಕೇಳಿ ಬಂದಿವೆ.

ಎಂಆರ್‌ಪಿಎಲ್, ಎನ್‌ಎಂಪಿಎ ಸಿಎಸ್‌ಆರ್ ನಿಧಿ, ಅಭಿಮಾನಗಳು ಮತ್ತು ಸಂಘ-ಸಂಸ್ಥೆ ಸಹಕಾರದೊಂದಿಗೆ ಶಾಲೆಯಲ್ಲಿ ಕೆಲವು ಅಭಿವೃದ್ಧಿ ಕೆಲಸಗಳು ನಡೆದಿವೆ. ಪ್ರಸಕ್ತ ಶತಮಾನೋತ್ಸವ ಸಮಿತಿ ವತಿಯಿಂದ 70 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಳ್ಳುತ್ತಿದೆ.

ತಿರುವೈಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಹಳೇ ಕಟ್ಟಡ
ತಿರುವೈಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಹಳೇ ಕಟ್ಟಡ

ಹಳೆ ಕಟ್ಟಡಕ್ಕೆ ರೈಲು ಬೋಗಿಗಳ ಚಿತ್ತಾರ!

ಹೆದ್ದಾರಿ ಪಕ್ಕದಲ್ಲಿ ತಡೆಗೋಡೆಗೆ ಹೊಂದಿಕೊಂಡಿರುವ ತಿರುವೈಲು ಮಾದರಿ ಹಿರಿಯ ಪ್ರಾಥಮಿಕ ಶಾಲಾ ಹಳೇ ಕಟ್ಟಡಕ್ಕೆ ಹಳೇ ವಿದ್ಯಾರ್ಥಿ ರಘು ಸಾಲ್ಯಾನ್ 1 ಲಕ್ಷ ರೂ. ವೆಚ್ಚದಲ್ಲಿ ರೈಲು ಬೋಗಿಗಳಲ್ಲಿರುವ ಬಣ್ಣ ಹಚ್ಚಿ ಸುಂದರಗೊಳಿಸುತ್ತಿದ್ದಾರೆ. ಇದರಲ್ಲಿ ಶಾಲೆಯ 100ರ ಸಂಭ್ರಮದ ದಾಖಲೆ ಬರಹಗಳೂ ಕಾಣಿಸಿಕೊಳ್ಳಲಿದೆ. ಶಾಲಾ ಕಟ್ಟಡ ಹೆದ್ದಾರಿ ಹೋಕರಿಗೆ ರೈಲಿನಂತೆ ಕಾಣಿಸಲಿದೆ

ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸ್ಥಳೀಯ ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್ ಹಾಗೂ ಸಮಾನ ಮನಸ್ಕರು ಒಗ್ಗೂಡಿ ಸಮಿತಿ ರಚಿಸಿ, ಕಾರ್ಯಪ್ರವೃತ್ತರಾಗಿದ್ದಾರೆ. ಸದ್ಯ ಶಾಲೆಯಲ್ಲಿ 300ಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಉತ್ತಮ ಸ್ಥಿತಿಯಲ್ಲಿರುವ ಹಳೇ ಕಟ್ಟಡ ನೆಲಸಮ ಮಾಡದೇ ಶಾಲಾ ಕಾರ್ಯಗಳಿಗೆ ಬಳಸಿಕೊಳ್ಳಲು ಅವಕಾಶವಿದೆ. ಶಾಲೆ ಹಳೆ ವಿದ್ಯಾರ್ಥಿ ಶಾಲಾ ಹಳೆಯ ಕಟ್ಟಡ ಸದೃಢವಾಗಿದೆ. ಹೆದ್ದಾರಿ ಗುತ್ತಿಗೆ ಕಾಮಗಾರಿ ಕಂಪೆನಿಯ ಇಂಜಿನಿಯರ್‌ಗಳೂ ಕಟ್ಟಡ ಕೆಡವದೆ ಉಳಿಸಿದ್ದಾರೆ. ಇಷ್ಟಿದ್ದರೂ ಜಿ.ಪಂ. ಸಿಇಒ ಮಾತ್ರ ಯಾರದ್ದೋ ಒತ್ತಡಕ್ಕೆ ಮಣಿದು ಹಳೆ ಕಟ್ಟಡ ನೆಲಸಮಗೊಳಿಸಬೇಕು ಎಂದಿದ್ದಾರೆ. ಶಾಲಾ ಅಭಿವೃದ್ಧಿ ಬಗ್ಗೆ ನಿರಾಸಕ್ತಿ ಹೊಂದಿರುವ ವ್ಯಕ್ತಿಗಳ ಮಾತಿಗೆ ಮಣೆ ಹಾಕಲು ನಾವು ಬಿಡುವುದಿಲ್ಲ. ರಘು ಸಾಲ್ಯಾನ್, ವಿದ್ಯಾಬೋಧಿನಿ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಶಾಲೆಯ ಹಳೇ ಕಟ್ಟಡ ಉತ್ತಮ ಸ್ಥಿತಿಯಲ್ಲಿದೆ. ಇದು ಈಗ ಹೆದ್ದಾರಿ ವಿಸ್ತರಣೆ ಪ್ರದೇಶದಿಂದ ಹೊರಗಿದೆ. ತರಗತಿಗಳು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ಬಳಿಕ ಹಳೆಯ ಕಟ್ಟಡ ನೆಲಸಮಗೊಳಿಸದೆ, ಶಾಲಾ ಕಾರ್ಯಗಳಿಗೆ ಬಳಸಿಕೊಳ್ಳಬಹುದು. ಉತ್ತಮ ಸ್ಥಿತಿಯಲ್ಲಿರುವ ಹಳೇ ಕಟ್ಟಡ ನೆಲಸಮಗೊಳಿಸುವ ಆತುರ ಯಾಕಾಗಿ? ಶಾಲಾ ಹಿತೈಷಿ https://www.vijayavani.net/inauguration-of-vachana-vasant-at-etadka https://www.vijayavani.net/anganwadi-opened-in-banjarumale

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net