

ಕುಂದಗೋಳ: ತಾಲೂಕಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಹಾಗೂ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿಗಳ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನ ಹಿರೇನೇರ್ತಿ ಗ್ರಾಪಂ ವ್ಯಾಪ್ತಿಯಲ್ಲಿ ರೈತರ ಹೊಲದಲ್ಲಿ ಕೈಗೊಂಡ ಬದು ನಿರ್ಮಾಣ ಕಾಮಗಾರಿ ವೀಕ್ಷಿಸಿ, ಕಾರ್ವಿುಕರೊಂದಿಗೆ ರ್ಚಚಿಸಿದರು. ಏ. 4ರಿಂದ ಆರಂಭವಾಗಿರುವ ನರೇಗಾ ಯೋಜನೆಯಡಿ ಕೂಲಿ ಕೆಲಸವನ್ನು ಜೂ. 17ರವರೆಗೆ ನಿರಂತರವಾಗಿ ಒದಗಿಸಬೇಕು. ಕಾರ್ವಿುಕರ ಬ್ಯಾಂಕ್ ಖಾತೆಗೆ ಸರಿಯಾದ ವೇಳೆಗೆ ಕೂಲಿ ಹಣ ಪಾವತಿಸಬೇಕು ಎಂದು ಕೂಲಿ ಕಾರ್ವಿುಕರು ಮನವಿ ಮಾಡಿದರು. ನಂತರ ಶಿರಗುಪ್ಪಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆದ ನರೇಗಾ ಕಾಮಗಾರಿಯನ್ನು ಭುವನೇಶ ಪಾಟೀಲ ವೀಕ್ಷಿಸಿದರು.
ನಂತರ ಮುನ್ನ ಪಟ್ಟಣದ ಜೆಎಸ್ಎಸ್ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಪಂ ಇಒ ಜಗದೀಶ ಕಮ್ಮಾರ, ಬಿಇಒ ಮಾದೇವಿ ಮಾಡಲಗೇರಿ, ಹಿರೇನೆರ್ತಿ ಗ್ರಾಪಂ ಪಿಡಿಒ ಶೈಲಾ ನೀಲಗಾರ, ಯರಗುಪ್ಪಿ ಗ್ರಾ ಪಂ ಪಿಡಿಒ ಪರಶುರಾಮ ರೋಗಣ್ಣವರ ಇತರರಿದ್ದರು.
ಮಾನವ ದಿನಗಳ ಸೃಜನೆ ಹೆಚ್ಚಿಸಲು ಸೂಚನೆ: ಕುಂದಗೋಳ ಪಟ್ಟಣದಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸಭೆ ನಡೆಸಿದ ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ, ನರೇಗಾದಲ್ಲಿ ಶೇ. 50ಕ್ಕಿಂತ ಕಡಿಮೆ ಸಾಧನೆ ಮಾಡಿದ ತಾಲೂಕಿನ ಭರದ್ವಾಡ, ಶಿರೂರ, ಯರೇಬೂದಿಹಾಳ, ದೇವನೂರ, ಸಂಶಿ, ಗುಡಗೇರಿ, ಗುರುವಿನಹಳ್ಳಿ ಗ್ರಾಪಂ ಪಿಡಿಒಗಳಿಂದ ಮಾಹಿತಿ ಪಡೆದು, ಮುಂದಿನ ದಿನಗಳಲ್ಲಿ ಮಾನವ ದಿನಗಳ ಸೃಜನೆ ಹೆಚ್ಚಾಗಬೇಕು ಎಂದು ಸೂಚಿಸಿದರು.
ತಪ್ಪಿತಸ್ಥರ ವಜಾಕ್ಕೆ ಮನವಿ: ಶಿರೂರ ಗ್ರಾಪಂ ಅಧ್ಯಕ್ಷೆ ನೀಲವ್ವ ಭಜಮ್ಮನವರ ಅವರು, ಕಮಡೊಳ್ಳಿ-ಶಿರೂರ ಗ್ರಾಮದ 6 ಲಕ್ಷ ರೂ. ವೆಚ್ಚದ ನೀರಿನ ಪೈಪ್ಲೈನ್ ಕಾಮಗಾರಿ ಕಳಪೆಯಾಗಿದೆ. ನಮ್ಮ ಗಮನಕ್ಕೆ ತರದೆ, ನನ್ನ ಡೊಂಗಲ್ ದುರುಪಯೋಗಪಡಿಸಿಕೊಂಡು ಬಿಲ್ ತೆಗೆದಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ, ಕೆಲಸದಿಂದ ವಜಾ ಮಾಡುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.