ಜಿಲ್ಲೆಯ ವಿವಿಧೆಡೆ ಜಲಜೀವನ್ ಮಿಷನ್ ಕಾಮಗಾರಿ ಪರಿಶೀಲಿಸಿದ ಜಿಪಂ ಸಿಇಒ

1
Published on

ಮಂಡ್ಯ: ತಾಲೂಕಿನ ವಿವಿಧೆಡೆ ನಡೆಯುತ್ತಿರುವ ಜಲಜೀವನ್ ಮಿಷನ್ ಕಾಮಗಾರಿಯನ್ನು ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಪರಿಶೀಲನೆ ನಡೆಸಿದರು.
ಚನ್ನೆಗೌಡನದೊಡ್ಡಿ, ಕೋಡಿಹಳ್ಳಿ ಫಾರ್ಮ್, ಹೊಸೂರು ಕಾಲನಿ, ಜಿ.ಕೆಬ್ಬಹಳ್ಳಿ, ಎಚ್.ಮಲ್ಲಿಗೆರೆ, ಭವಾನಿಕೊಪ್ಪಲು ಗ್ರಾಮಕ್ಕೆ ಭೇಟಿ ನೀಡಿ ಕಾಮಗಾರಿಗಳ ಮಾಹಿತಿ ಪಡೆದರು. ಅಂತೆಯೇ ಎಚ್.ಮಲ್ಲಿಗೆರೆ ಗ್ರಾಮದ ಅಂಗನವಾಡಿ ಹಾಗೂ ಶಾಲೆಗೆ ಭೇಟಿ ನೀಡಿ ಬಿಸಿಯೂಟ ಹಾಗೂ ಕಲಿಕೆಯ ಬಗ್ಗೆ ಮಕ್ಕಳ ಜತೆ ಸಂವಾದ ನಡೆಸಿದರು. ಬಳಿಕ ಬಸರಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಂಜಿಎನ್‌ಆರ್‌ಇಜಿಎ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕೂಲಿ ಕಾರ್ಮಿಕರ ಜತೆ ನರೇಗಾ ಕೆಲಸ ನೀಡುತ್ತಿರುವ ಬಗ್ಗೆ ನಿಗದಿತ ಸಮಯದಲ್ಲಿ ಕೂಲಿ ಹಣ ಪಾವತಿಯಾಗುತ್ತಿರುವ ಬಗ್ಗೆ ವಿವರಣೆ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net