

ಬೆಳಗಾವಿ : ವಯಸ್ಸಾದಂತೆ ಪ್ರತಿಯೊಬ್ಬರಲ್ಲೂ ಒಂದಿಲ್ಲೊಂದು ಅಂಗವೈಕಲ್ಯ ಎದುರಾಗುತ್ತದೆ. ಯಾವುದೇ ಸಂದರ್ಭದಲ್ಲಿಯೂ ಕೀಳರಿಮೆ ಬಿಟ್ಟು, ಛಲ ಹಾಗೂ ಸ್ವಾಭಿಮಾನದಿಂದ ಉತ್ಸುಕತೆಯಿಂದ ಪ್ರಯತ್ನಿಸಬೇಕು ಅಂದಾಗ ಮಾತ್ರ ಯಶಸ್ಸು ಸಾಧ್ಯ
ಎಂದು ಹೆಚ್ಚುವರಿ ಪ್ರಾದೇಶಿಕ ಆಯುಕ್ತರ ನಜಮಾ ಫಿರಜಾದೆ ಹೇಳಿದರು.
ನಗರದಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಬೆಳಗಾವಿ ಜಿಲ್ಲಾ ವಿಕಲಚೇತನರ ಕ್ರೀಡಾ ಸಂಘದ ಮೂರನೇ ವಾರ್ಷಿಕೋತ್ಸವ, ಕ್ರೀಡಾ ಸಲಕರಣೆ ವಿತರಣೆ ಹಾಗೂ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.
ಮನಸ್ಸಿನಲ್ಲಿ ಸಾಧಿಸುವ ಛಲ ಇಲ್ಲದಿರುವಾಗ
ಸಾವಿರ ದೇವರನ್ನು ಪೂಜಿಸಿದರೇ ಎನು ಫಲ? ಎಲ್ಲ ಸ್ಪರ್ಧಾಳುಗಳು ಅಂಗವೈಕಲ್ಯ ಮೆಟ್ಟಿ ನಿಂತಿದ್ದೀರುವುದು ಶ್ಲಾಘನೀಯ. ಯಾವುದೇ ಕೊರತೆಗಳಿದ್ದರೂ ಇಲಾಖೆಯನ್ನು ಸಂಪರ್ಕಿಸಿ, ಅಗತ್ಯ ನೆರವು ನೀಡುವುದಾಗಿ ಹೇಳಿದ ಅವರು, ತುರ್ತಾಗಿ ವೈಯಕ್ತಿಕ 10 ಸಾವಿರ ರೂ.ನೆರವು ನೀಡುವುದಾಗಿ ಹೇಳಿದರು.
ಜಿಪಂ ಸಿಇಒ ಹರ್ಷಲ್ ಬೋಯಲ್ ನಾರಾಯಣ ಮಾತನಾಡಿ, ಅಂಗವಿಕಲರ ಕ್ರೀಡಾಪಟುಗಳ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿವಿಧ ವ್ಯವಸ್ಥೆ ಕಲ್ಪಿಸುವುದಕ್ಕಾಗಿ ಜಿಲ್ಲಾಪಂಚಾಯಿತಿಯಿಂದ ಒಂದು ಎಕರೆ ಜಮೀನು ವಿತರಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಅಂಗವಿಕಲರ ಕ್ರೀಡಾಪಟುಗಳ
ತರಬೇತುದಾರ ವಿ.ಎಸ್.ಪಾಟೀಲ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಕ್ತಾರ ಪಠಾಣ್ , ಸುರೇಶ ಯಾದವ್, ಮಹಾಂತೇಶ ಹೊಂಗಲ ಸೇರಿದಂತೆ ಇತರರು ಇದ್ದರು