ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ

IMG-20230330-WA0012.jpg
Published on


ಬೆಳಗಾವಿ: ವಿಧಾನಸಭೆ ಚುನಾವಣೆಯಲ್ಲಿ ಶೇ.100 ರಷ್ಟು ಮತದಾನ ಸಂಕಲ್ಪ ತೊಟ್ಟಿರುವ ಜಿಲ್ಲಾ ಸ್ಪೀಪ್ ಸಮಿತಿಯು ಗುರುವಾರ ಬೆಳಗಾವಿ ನಗರದಲ್ಲಿ ಮತದಾನ ಜಾಗೃತಿ ಅಭಿಯಾನ ನಡೆಸಿದರು.
 ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಪಂ ಸಿಇಒ ಹರ್ಷಲ್ ಭೋಯರ್ ನೇತೃತ್ವದಲ್ಲಿ ಗುರುವಾರ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ (ವ್ಯಾಕ್ಸಿನ ಡಿಪೋ)ಯಿಂದ ಆರ್.ಪಿ.ಡಿ. ಕ್ರಾಸ್‌ವರೆಗೆ ಸಾಗಿ ಮತದಾನ ಜಾಗೃತಿ ಘೋಷಣೆ ಗಳೊಂದಿಗೆ ಜಾಥ ಕಾರ್ಯಕ್ರಮ ಜರುಗಿತು.
ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಶ ಕೊಣಿ, ಜಿಲ್ಲಾ ಆಯುಷ ಅಧಿಕಾರಿ ಡಾ. ಶ್ರೀಕಾಂತ ಸುಣದೊಳ್ಳಿ, ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ವಿ ಕಿವಡಸನ್ನವರ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ಬಿ.ಎನ ತುಕ್ಕಾರ ಜಿಲ್ಲಾ ಕೀಟ ಜನ್ಯ ಸಾಂಕ್ರಾಮಿಕ ರೋಗಗಳು ನಿಯಂತ್ರಣ ಅಧಿಕಾರಿ ಎಂ.ಎಸ್.ಪಲ್ಲೇದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net