

ಹಾವೇರಿ: ವ್ಯಕ್ತಿಯೊಬ್ಬ ಫೋನ್ ಕಳ್ಳತನ ಮಾಡಿ ಅದರಲ್ಲಿದ್ದ ಫೋನ್ಪೇ ಮೂಲಕ 5.66 ಲಕ್ಷ ರೂ.ಅನ್ನು ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡ ಕುರಿತು ಇಲ್ಲಿಯ ಸೈಬರ್ ಕೆಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸವಣೂರ ತಾಲೂಕಿನ ಕಡಕೋಳ ಗ್ರಾಮದ ತಿಪ್ಪಣ್ಣ ಯಲ್ಲಪ್ಪ ಸುಬ್ಬಣ್ಣನವರ (54) ಎಂಬುವರ ಹಣ ವರ್ಗಾಯಿಸಿಕೊಂಡಿರುವುದು.
ಇವರ ಫೋನ್ ಅನ್ನು ಯಾರೋ ಕಳ್ಳತನ ಮಾಡಿದ ಖದೀಮರು ಅದರಲ್ಲಿದ್ದ ಫೋನಪೇ ಮೂಲಕ 5.66 ಲಕ್ಷ ರೂ. ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.