

ಗಂಗಾವತಿ: ಕೊಪ್ಪಳದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಹಮ್ಮಿಕೊಂಡಿದ್ದ ಜಿಲ್ಲಾಮಟ್ಚದ ದಸರಾ ಕ್ರೀಡಾಕೂಟದಲ್ಲಿ ತಾಲೂಕಿನ ಡಣಾಪುರ ಕ್ರೀಡಾಪಟುಗಳು ಸಮಗ್ರ ಪ್ರಶಸ್ತಿಯೊಂದಿಗೆ ವಲಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಗುಂಪು ಮತ್ತು ವೈಯಕ್ತಿಕ ವಿಭಾಗದ ಕ್ರೀಡೆಯಲ್ಲಿ ಭಾಗವಹಿಸಿದ್ದು, ಕಬಡ್ಡಿಯಲ್ಲಿ ಡಣಾಪುರ ಬಾಲಕಿಯರ ಕಬಡ್ಡಿ ತಂಡ ಪ್ರಥಮ, ಖೋಖೋದಲ್ಲಿ ದ್ವೀತಿಯ ಸ್ಥಾನ ಪಡೆದುಕೊಂಡಿದೆ
. ವೈಯಕ್ತಿಕ ವಿಭಾಗದಲ್ಲಿ 100ಮೀ. ಮತ್ತು 400 ಮೀ. ಓಟದಲ್ಲಿ ಅಕ್ಷತಾ ಶಿವಕುಮಾರ ಮತ್ತು 3000ಮೀ. ಓಟದಲ್ಲಿ ಸೌಜನ್ಯಾ ದ್ವೀತಿಯ ಸ್ಥಾನದೊಂದಿಗೆ ವಲಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತರಿಗೆ ಯುವ ಸಬಲೀಕರಣ ಅಧಿಕಾರಿ ವಿಠ್ಠಲಜಾಬಗೌಡರ್ ಪ್ರಮಾಣ ಪತ್ರ ನೀಡಿ ಗೌರವಿಸಿದರು.